ಹಳೆ ನೆನಪುಗಳ ಕಳೆಯುತ್ತ, ಹೊಸ ದಿನಗಳ ನೆನೆಯುತ್ತ,
ನಿನ್ನೆ ನಾಳೆ ಗಳ ಚಿಂತೆಯಲ್ಲಿ , ದಿನಗಳೆಲ್ಲ ಉರುಳುತ್ತಾ ,
ಕಳೆಯುತಿದೆ ಹಳೆ ವರುಷ , ಕಹಿ ನೆನಪುಗಳ ಮರೆಸುತ್ತ ,
ಬರುತಲಿದೆ ಹೊಸ ವರುಷ , ಹೊಸ ಹುರುಪು ಮೂಡಿಸುತ್ತ ,
ಸಂತೋಷದಿ ಸ್ವೀಕರಿಸಿ ,ಹೊಸ ಪ್ರೇರಣೆ ಮಾಡುತ್ತ ,
ಹೊಸ ವರುಷಕೆ ತಮಗೆಲ್ಲ ಆತ್ಮಿಯ ಸ್ವಾಗತ ……………………!!!
ನೆನೆಯುತ್ತ ನಿಮ್ಮ ನೋವು ನಲಿವುಗಳನ್ನು,
ಹಂಚಿಕೊಳ್ಳುತ್ತಾ ನಿಮ್ಮ ಸುಮಧುರ ಕ್ಷಣಗಳನ್ನು ,
ಅಳಿದು-ಉಳಿದು ಹೋದ ಒಲವಿನ ಬಯಕೆಗಳನ್ನು ,
ಸಿದ್ಧರಾಗಿ ಸವಿಯಲು ಮುಂಬರುವ ದಿನಗಳನ್ನು ,
ಸ್ವಾಗತಿಸಿ ಸಂಭ್ರಮದಿ ಹೊಸ ವರುಷವನ್ನು …................!!!
ದ್ವೇಷ-ಭಾವವ ಬಿಟ್ಟು , ಪ್ರೀತಿ-ಪ್ರೇಮದ ಪಣತೊಟ್ಟು ,
ಬೇಡವಾದುದೆಲ್ಲ ಹಳೆ ವರುಷದ ಜೋತೆಇಟ್ಟು,
ಸುಬುದ್ಧಿ , ಸಹಯೋಗ ,ಸಹಾಯಗಳ ಮನಸಿಟ್ಟು ,
ಸಾಧನೆ , ಸಾಹಸಗಳ ಹೊಸ ಗುರಿಯ ಬರೆದಿಟ್ಟು ,
ಹೊಸ ವರುಷದಿ , ಹಳೆ ಜೀವನಕೆ ಮರುಜನ್ಮವಕೊಟ್ಟು,
ಸ್ವಾಗತಿಸಿ ಹೊಸ ವರುಷವು ಶಾಂತಿ - ಸಮ್ರದ್ಧಿಗೆ ಕರೆ ಕೊಟ್ಟು ………!!!!
ಹೊಸ ವರುಷದಿ ನಿಮಗೆಲ್ಲ ಆತ್ಮಿಯ ಸ್ವಾಗತ,