ಸಾಹಿತ್ಯ, ಸಂಗೀತ , ಸಂಕಲನ : ಮಹೇಶ್ ಇನಾಪುರೆ
ಕಂಠದಾನ : ಕಾರ್ತಿಕ್ ಮೂರ್ತಿ
ಹಿನ್ನೆಲೆ ಸಂಗೀತ : ಮಾರ್ಷಲ್ ಕೆ ಥಾಮಸ್ .
ತಾಂತ್ರಿಕ ನಿರ್ವಹಣೆ : ಅನಿಲ್ ಮೂರ್ತಿ , ಮೇಡ Bros, ಸಂದೀಪ್ ಶೆಟ್ಟಿ
ಧನ್ಯವಾದಗಳು ........................ :)
Female Version :
ಅಂತರ ನಿರಂತರ ಪ್ರತಿ ಘಳಿಗೆಯೂ ಇರುವೆ ಹತ್ತಿರ
ಸುಂದರ ಅತಿ ಸುಂದರ ನನ್ನ ಬಾಳಿಗೆ ನೀ ಚಂದಿರ,
ನನ್ನ ಗಮನವು ಬದಲಾಗಿದೆ
ನಿನ್ನ ನೆನಪಲೆ ದಿನ ಸಾಗಿದೆ,
ನಿಜ ಹೇಳಲೇ ನಿನಗೊಂದು , ನಿನೇನೇ ನನ್ನ ಕಣ್ಣ ಬಿಂದು ।। ೧।।
ಯಾರೋ ನನ್ನ ಹೆಸರ್ನು ಕರೆದಿರೋ ಹಾಗನಿಸಿದೆ
ಕರಣವು ನಿನ್ನ ಕೂಗಿಗೆ ಕಾತುರದಿ ಕೇಳಬಯಸಿದೆ
ನೀ ಕೊಟ್ಟ ಕಾಲುಗೆಜ್ಜೆ ದುರುತಿದೆ ಪದೇ ಪದೇ
ಕಿರುಬೆರಳ ಹಿಡಿದು ನೀ ನಡೆಸು ಈ ಹೃದಯ ಕಾದಿದೆ
ನಿಜ ಹೇಳಲೇ ನಿನಗೊಂದು , ನಿನೇನೇ ನನ್ನ ಕಣ್ಣ ಬಿಂದು ।। ೨।।
ದೇವರ ಹುಡುಕಲು ಕಣ್ಣೆದುರಿಗೆ ನೀ ಬಂದಿಹೆ
ಅವನಲಿ ಇಟ್ಟ ಪ್ರಶ್ನೆಗೆ ಉತ್ತರ ನಿನ್ನ ಪ್ರೀತಿಯೇ
ಇನ್ನೇನು ಬೇಕು ನನಗೆ ಈ ಬಾಳ ಸಾಗರದಿ
ನೀನಾದೆ ನನ್ನ ನೌಕೆ ವಾತ್ಸಲ್ಯದಾಗಸದಿ
ನಿಜ ಹೇಳಲೇ ನಿನಗೊಂದು , ನಿನೇನೇ ನನ್ನ ಕಣ್ಣ ಬಿಂದು ।। ೩।।
3 comments:
Good one. all the best Mahesh.:)
Creative people ...Good work...keep going:)
Superb le.. :) Nice composition, good music and awesome singing.. :)
Post a Comment