Sunday, November 4, 2012

ಕನ್ನಡ _ ಕನ್ನಡ









ತುಂಬಾ ಹಳೆ ಭಾಷೆ ನಮ್ದುಲಾ  ..... ಕನ್ನಡ , ಕನ್ನಡ
ಮನಸು ಬಿಚ್ಚಿ ಒಮ್ಮೆ ಮಾತಾಡಲಾ ..... ಕನ್ನಡ , ಕನ್ನಡ
ನಮ್ಗೆಂಟು ಜ್ಞಾನಪೀಠ ಬಂತಲಾ ..... ಕನ್ನಡ , ಕನ್ನಡ
ಕನ್ನಡಾಗ್ ಹೋರಾಡಿದವರಿಗೆ ಮರಿಬೇಡ್ಲಾ....... ಕನ್ನಡ , ಕನ್ನಡ


ನಮ್ ತಾಯಿ ಭುವನೇಶ್ವರಿ , ನಮ್ ಭಾಷೆ ಭಾರೀ ಅದರಿ,
ಕಾವೇರಿ ನೀರು ನಮಗಂತ ಹರಿವ ಧರೆಗಿಳಿದ ಅಮ್ರತಾರ,
ಗಂಧದ ಬಿಡು ಕಣ್ರೀ , ಮಲೆನಾಡ ಸೊಬಗ ನೋಡ್ರಿ ,
ಮುದ್ದೇನ  ತಿಂದು, ರೊಟ್ಟಿನ ಅಗೆದು , ಒಂಥರಾ ಚೆಂದ ಬಿಡ್ರಿ .....||..... ಕನ್ನಡ , ಕನ್ನಡ ....||


ಎಂತಾ ಮಾರಾಯರೇ , ಮಂಡೇ ಬಿಸಿಯಾಯ್ತುರಿ,
ಬಂದ್ರುನು ಕನ್ನಡ ಮಾತಾಡದೆ ಸ್ವಲ್ಪ ಗಾಂಚಲಿ ಆಡ್ತಿರಲ್ರಿ,
ಎರಡರ್ಧ ಕಾಫೀ ಕೊಡ್ರಿ , ಪ್ರೀತಿಯ ಸಕ್ಕರೆ ಹಾಕಿ,
ಸ್ನೇಹಕ್ಕು ಸಿದ್ಧ , ಸಮರಕ್ಕೂ ಬದ್ಧ , ನಮ್ ತವ ಇಟ್ಕೋಬೇಡ್ರಿ.... ||..... ಕನ್ನಡ , ಕನ್ನಡ ....||

ರಚನೆ:
ಮಹೇಶ್  ಐನಾಪುರೆ....!!

ಸಂಗಿತ, ಹಿನ್ನೆಲೆ ಗಾಯಕರು & ಪ್ರೋತ್ಸಾಹಕರು :
ಅನೀಲ್ ಮೂರ್ತೀ, ಅರ್ಜುನ್ ಮೇಡ, ಸಂದೀಪ್ ಶೆಟ್ಟಿ, ಅಕ್ಷಯ್ ಮೇಡ 

Wednesday, August 15, 2012

BSNL : 3 ನಾಮಾ, ಮೇಲೊಂದಿಷ್ಟು ಅಕ್ಷತೆ ಕಾಳು...:)


                                 B -------------------------------->    Bhayankara 
                                        S ---------------------------->   Service 
                                                N ---------------------->    Nim
                                                         L ---------------->    Luckಇದ್ದರೇ 
    

ಪಾತ್ರೆ ಇದ್ದ ಮೇಲೆ ಅಡುಗೆ ಮಾಡಲೇ ಬೇಕು, ಅದೇ ರೀತಿ ಭಾಂಡ್ಲಿ ತಗೊಂಡ್ ಮೇಲೆ ವಗ್ರಣೆ ಹಾಕ್ಲೇ ಬೇಕು. ಹಿಂಗೇ ಖಾಲಿ ಇರೋ ನಮ್  life ಅನ್ನೋ ಭಾಂಡ್ಲಿಲೀ  ಒಂದು ದಿನಾ ವಗ್ರಣೆ ಬೀಳುತ್ತೆ  ಅಂತಾ ಎಂದು ಅನ್ಕೊಂಡಿರಲಿಲ್ಲ.. :(

ಹೌದು, ಇದು ಕಥೆಯಲ್ಲಾ , ಜೀವನವು ಅಲ್ಲಾ , ಒಂಥರಾ ಗಾಂಚಾಲಿ , ಮುಂದೆ ಓದಿ ನಿಮಗೂ ಗೊತ್ತಾಗ್ಲಿ... :)

Software ಇಂಜಿನಿಯರ್ಸ್ ಸಂಸಾರ ಬಿಟ್ಟು ಬೇಕು ಅಂದ್ರೆ ಇರ್ತಾರೆ, ಕೊನೆಗೆ ಪರಿಸ್ಥಿತಿ ಸರಿ ಹೋಗ್ತಿಲ್ಲ ಅಂತಾ GF/BFನು (ಇದ್ಡವ್ರು... ;) ) ಬಿಟ್ಟು ಇರ್ತಾರೆ, ಆದ್ರೆ  INTERNET ಬಿಟ್ಟು ಯಾರು ಇರ್ತಾರೆ  ಹೇಳಿ..? ಅಲ್ವಾ,..!! ಇದೆ ರೀತಿ ಹೊಸ ಮನೇಗೆ ಬಂದ ಮೇಲೆ ನನ್  Room-Mate 'Ghajini' ಇಂಥದ್ದೊಂದು ಬೇಡಿಕೆ ನನ್ನ ಮುಂದೆ ಇಟ್ಟ.

ಇದಕ್ಕಿಂತ ಮುಂಚೆ ನಮ್ಮ ಮನೆ ಬಗ್ಗೆ ಹೇಳಲೇಬೇಕು  : --->

Here It  Is ............Introduction begins….!!!

Myself ---- Chief-Minister of the home. Management, Accounts(Revenue) department.. ;)
Ghajni (Arjun) --- Home Department, ಬೇಜಾನ್ ಖಿಲಾಡಿ, ಅಡುಗೆ ಮಾಡೋದ್ರಲ್ಲಿ World Famous Mr.chef.. ;)
Jini (Anil)--- Defense Minister --- Magic man --- ಮನೆ  Border ಎಲ್ಲಾ  ಇವನೇ ನೋಡ್ಕೊಳ್ಳೋದು ..;)
Sisya (Karthik) --- Bat Man --- Sports Minister, ಬೇಜಾನ್ ಆಟ ಅಡಿಸ್ತಾನೆ … :D:D:D:D

ಹೌದು, ಇದು ನಮ್ಮ ಸಂಸಾರ. ಮನೇಲಿ ಏನೇ ನಡೀಲಿ, ಬಂದಿರೋ Billನ ಮೇಲಿರೋ 4 ದಿಕ್ಕುಗಳಿಂದ Divide ಮಾಡಿ, ಮುಂದಿನ ತಿಂಗಳಿಗೆ ಕಾಲು ಇಡೋದು ಸಂಪ್ರದಾಯ...hehehe

ಹೊಸ ಮನೆಗೆ ಬಂದು ಹತ್ರ-ಹತ್ರ ಒಂದು ತಿಂಗಳಾಗಿತ್ತು,  INTERNET ಇಲ್ದೆ ನಮಗೂ ಸ್ವಲ್ಪ ಜಾಸ್ತಿನೆ ಬೇಜಾರಾಗಿತ್ತು,
Ghajini ಅವನ ಹಳೆ(ಒಳ್ಳೆಯ) ಅನುಭವ ಇದ್ದ BSNL (ಭಯಂಕರ ಸರ್ವಿಸ್ ನಿಮ್ ಲಕ್ಕಿದ್ರೆ )ನ ಮನೆಗೆ ಹಾಕ್ಸೋಣ ಅಂತ ಹೇಳಿದ ಮೇಲೆ online ಹೋಗಿ Immidiate Book ಮಾಡಿದ್ವಿ.

Book ಮಾಡಿದ  2 ದಿವಸದೊಳಗೆ ಯಾರೋ ಒಬ್ಬ ನನ್ನ Mobile ಗೆ ಫೋನ್ ಮಾಡಿ, “sir, ನಿಮ್ಮ  address proof ಮತ್ತು  photo ಕೊಡಬೇಕು , application ತಗೋಂಡು ಬರ್ತೀನಿ ” ಅಂತ ಹೇಳಿ  office ಹತ್ರ ಬಂದ... Application ತಗೊಂಡು ಬಂದಿದ್ದ ಅತಿಥಿಗೆ  side ಅಲ್ಲಿರೋ  canteen ಗೆ  ಕರೆದುಕೊಂಡು  ಹೋಗಿ As per LAW 500 INR ಕೊಟ್ಟೆ.... :)

ಅತಿಥಿ:  sir, connection ಯಾರ ಹೆಸರಿಗೆ?
ನಾನು: ಗುರು, ನನ್ನ photo ಕೊಟ್ಟು, ಬೆರಯವನ ಹೆಸರು ಕೊಡಕ್ಕೆ ನಾನೇನು Voter-ID ನಾ ಮಾಡಿಸ್ತಿದ್ದಿನಿ? hehehe,  owner  ನಾವೇ , ಹೆಸರು ನಮ್ದೆ .. ಅಸ್ಟೆ …;)

Govtಗೆ ಕೆಲಸ ಮಾಡೋರು ಯಾರು ತಾನೇ ಕೆಲಸ ಆದ ಮೇಲೆ ಸುಮ್ಮನೆ ಹೋಗ್ತಾರೆ ಹೇಳಿ, ಎಲ್ಲಾ ಆದ ಮೇಲೆ  Side ಅಲ್ಲಿ ಕರೆದು  "Sir, ನಮಗೇನು ಇಲ್ವಾ ? ಅಂದ ….;)

ನಮ್ದೆನಿದ್ರು PRIVATE ಜೊತೆ ವ್ಯವಹಾರ, ಇ Govtನವರ ಸಹವಾಸಕ್ಕೆ ಹೋಗೋದೇ ಇಲ್ಲ..!!!, ಇದು ನಾನು ಚಿಕ್ಕವನಾಗಿದ್ದಾಗ Govt ಮೇಲಿನ ಅಭಿಮಾನದಿಂದ ತಗೊಂಡಿರೋ  Decision…;) ;) ;)
ಇ ತರಹ ದುಡ್ಡು ಕೇಳಿದ್ದು ನೋಡಿ ಒಂಥರಾ ಅನಿಸಿದ ನನಗೆ , ಗುರು Connection ಬರಲಿ ಆಮೇಲೆ ನೋಡೋಣ ಅಂದೇ,
ಅದಕ್ಕೆ ಅತಿಥಿ ಸಾಹೇಬ್ರು  'ನಮ್ಮದು ಇಸ್ಟೇ Sir Service, ಮುಂದೆನಿದ್ರು Officeನವರದು  ಅಂತ ಮುಂದೆ ಕೈ ಮಾಡಿ ಮತ್ತೆ ದುಡ್ಡು ಕೇಳಿದ. ಅದಕ್ಕೆ  ಏನು ತೋಚದ ನಾನು, ಮುಂದಿನ ಸಲ Connection ತಗೊಂಡಾಗ settle ಮಾಡ್ತೀನಿ ಅಂತ ಹೇಳಿ
Take Care ಅಂದೇ....;);)

After 1 Month---->

ದುಡ್ಡು ಕೊಟ್ಟು ಹತ್ರ-ಹತ್ರ 1 ತಿಂಗಳಾಗಿತ್ತು, Connection ಕನಸಲ್ಲೂ ಬರಲಿಲ್ಲ, :(
ಹಿಂಗೆ ಆದ್ರೆ ಹೆಂಗೆ ಅಂತ, BSNL Customer Care(Rare) ಗೇ Call ಮಾಡಿ Complaint ಕೊಡೋಣ ಅಂತ ನೋಡಿದ್ರೆ Call Receive ಮಾಡೋ ಪುಣ್ಯಾತ್ಮರು ಒಬ್ಬರು ಸಿಗಲೇ ಇಲ್ಲ... :(

ಅಕಸ್ಮಾತ್  Call Receive ಮಾಡಿದ್ರು ಇನ್ನೊಂದು ಯಾವುದೊ Phone ನಂಬರ್ ಕೊಟ್ಟು ಸುಮ್ನಾಗ್ತಿದ್ರು .. ಒಂದು ದಿನ Decide ಮಾಡಿ ಎಲ್ಲ 4 ಜನ ಸೇರಿ, ಹುಡುಗರು Movie style ತರಹ, ಹತ್ರ ಇರೋ BSNL Office ಗೆ ನುಗ್ಗ್ ಬಿಟ್ವಿ
ಯಾರು ಗತಿನೇ ಇರ್ಲಿಲ್ಲ, Security Guard ನೋಡಿದ್ರೆ ನಮ್ಮನ್ನ ಯಾಕೆ-ಯಾಕೆ ಅಂತ ಕೇಳ್ತಿದ್ದ. ಅಂತು-ಇಂತೂ ಸ್ವಲ್ಪ ಹೊತ್ತಾದ ಮೇಲೆ ಒಬ್ಬ ದೇವರು ಪ್ರತ್ಯಕ್ಷ ಆದ.

ನಾನು: ದೇವ್ರು, Connection ಗೆ Apply ಮಾಡಿ 1-ಕಾಲು ತಿಂಗಳಾಯಿತು, ಇನ್ನು ನಮ್ಮ ಮನೆಗೆ BSNL Connection ಭಾಗ್ಯ ಬಂದಿಲ್ವಾ..? ಅಂತ ಕೇಳಿದೆ...
ಅದಕ್ಕೆ ಅವನು ಕೊಟ್ಟ ಉತ್ತರ ಏನಂದ್ರೆ ....???
Sir, ಬಂದಿದ್ವಿ ನಿಮ್ಮ ಮನೆ ಹತ್ರ, ಯಾರೋ ನಿಮ್ಮ ಮನೆ ಮುಂದಿರೋ Buildingನ ಬಿಳಿಸ್ತಿದ್ದಾರೆ ಅಂತ ಹೇಳಿದ್ರು ಅದಕ್ಕೆ Wire ಹಾಕಲಿಲ್ಲ... :D :D :)

ತಗೊಳ್ಳಪ್ಪ,  ಇವನ ಇಂತಹ ಉತ್ತರ ಕೇಳಿ ನಮ್ಮ ಕಿವಿಗಳು ಧನ್ಯಆದ್ವು ....HeHeHe   

ನಾನು: ಬಿಳಿಸಬೇಕಂದಿರೋ Building Owner ಮೊನ್ನೆ ಹೋಗೆ ಹಾಕಿಸ್ಕೊಂಡಿದ್ದಾನೆ , Building ಬಿಳಿಸೋದನ್ನ ನಿಲ್ಲಿಸಿದ್ದಾರೆ. So ತಾವು ದಯಮಾಡ್ಸಿ Wire ಏಳಿದ್ರೆ ಪುಣ್ಯ ಬರುತ್ತೆ .... :D  ಅಂತ ಹೇಳಿ ಕರ್ಕೊಂಡು ಬಂದ್ವಿ. :)

Wire ಏಳಿದವನು ಸುಮ್ಮನೆ ಹೋಗ್ತಾನಾ,,,.? ಸೈಡ್ ಅಲ್ಲಿ ಬಂದು Sir ಅಂದ .... :D ಹೋಗ್ಲಿ ಬಿಡಪ್ಪ ಹೇಳಿದ ತಕ್ಷಣ Wire ಏಳಿದಿದ್ದಾನೆ ಅಂತ 50 ಕೊಟ್ಟರೆ, ಸರ್ ಇನ್ನೊಬ್ಬ ಬಂದಿದ್ದಾನೆ ಜೊತೆಗೆ ಅವನಿಗೆ ಅಂತ ಇನ್ನು 50 EXTRA ಇಸ್ಕೊಂಡ...:( :(

Wire ಹಾಕಿದ್ದು, ಬರಗಾಲ್ ಭೂಮಿಗೆ ಬೋರಿಂಗ್ ಹಾಕಿಸಿದ ಹಾಗಾಯಿತು ನಮಗೆ , ಆದ್ರೆ ಬರಿ Wire ಇಂದ ಬಟ್ಟೆ ಒಣಗಿ ಹಾಕೋದಕ್ಕೆ ಬಿಟ್ಟರೆ ಯಾವುದಕ್ಕೂ USE ಆಗಲ್ಲ ಅಂತ ಎಲ್ಲರಿಗು ತಿಳಿದಿರುವ ವಿಷಯ ... Hehehe
 ಮತ್ತೆ  Instrumentsಗೋಸ್ಕರ (phone& Wi-fi modem) ಫೋನ್ ಮಾಡಿ ಮಾಡಿ ಸುಸ್ತಾಗಿ ಹೋಯಿತು.

ಕೊನೆಗೆ ಸಾಕಾಗಿ , 500 ರುಪಾಯಿ ಹೋದ್ರೆ ಹೋಯಿತು ಅಂತ ಬೇರೆ Private Connection ಹಾಕಿಸ್ಕೊಳ್ಳೋಣ ಅಂತ Decide ಮಾಡಿದ್ವಿ .... :(   ಇಸ್ಟೇ ಆಗಿದ್ದರೆ ಚೆನ್ನಾಗಿರ್ತಿತ್ತು ... ಆದರೆ..........????

Next ದಿನ ಇದ್ದಕ್ಕಿದ್ದಂಗೆ BSNL ಇಂದ Call ಬಂತು.... :):):):)

Caller: Sir, Ur BSNL billing will starts from tomorrow..!! I have to deliver u instruments (phone and modem). will u be available at home now..? I ll send my technical person to provide connection.....!!!

Me: ಅಣ್ಣ, we don’t want connection only..!! wats this non-sense…?
Its been  2 months after applying for connection, u are calling now and Informing me.

Caller: No sir, we dint have stock of modem , sorry for the in-convenience sir. Or else i will be in trouble.. :(

ok ok ok ,,, ಇಸ್ಟೆಲ್ಲಾ ಹೇಳಿದ ಮೇಲೆ ಅದ್ಯಾಕೋ ಗೊತ್ತ್ತಿಲ್ಲ , BSNL ವಿಷಯದಲ್ಲಿ ಚೂರು-ಚೂರು ಆಗಿದ್ದ ಹೃದಯದ ಭಾಗಗಳೆಲ್ಲ ಒಂದಾಗಿ ಒಂಥರಾ ಲವ್ ಬಂತು .... He He He
Office ಇಂದ Ownerಗೆ Immidiate Call ಮಾಡಿ ಮನೆಗೆ BSNL Connection ಹಾಕಕ್ಕೆ ಬರ್ತಿದ್ದಾರೆ ಅಂತ ಹೇಳಿ, ಅವರನ್ನೇ Attend ಮಾಡಕ್ಕೆ ಹೇಳಿದೆ. ದೇವರಂಥ Owner, ಆಗಲ್ಲ ಅಂತ ಹೇಳಲಿಲ್ಲ... ;) ;) hehehe
 
So, ಸಾಯಂಕಾಲ ಮನೆಗೆ ಬಂದಾಗ INTERNET ಇತ್ತು.. ಆದ್ರೆ Connection ಸೆಟ್ ಮಾಡಿ ತಪ್ಪಾಗಿರೋ PassWord ಬರ್ದಿಟ್ಟಿದರು BSNL ಸಾಹೇಬ್ರು, ಅದನ್ನ BSNL Portal Site ಇಂದ ಹೇಗೋ ತಿಳಿದುಕೊಂಡ್ವಿ .. :(

ಆದ್ರೆ ನಿಜ ಏನಂದ್ರೆ ...
ಕಿತ್ತಹೊಗಿರೋ Phone, Workಆಗದೆ ಇರೋ wi-fi modem.. ಇದು ಅವರು ಕೊಟ್ಟು ಹೋದ  instruments….!!! :( :(


Connect ಮಾಡಬೇಕಂದ್ರೆ  Modemನ 2-3ಸಲ ನೆಲಕ್ಕೆ ಗುದ್ದ ಬೇಕು..:(
ಗುದ್ದಿ-ಗುದ್ದಿ ;) 1 ತಿಂಗಳು ನಡೆಸಿದ್ವ...!! 3- 4 times BSNL Customer Care(Rare)ಗೆ  complaint ಕೂಡ ಕೊಟ್ಟಿದ್ದೈತು.
Phone  ನೋಡಿದ್ರೆ ರಾತ್ರಿ ಎಲ್ಲಾ ಇದ್ದಕ್ಕಿದ್ದಂಗೆ Ring ಆಗ್ತಿತ್ತು.... ಸುಮ್ಮ-ಸುಮ್ಮನೆ ಶಿವಾ. :( :( :( ಯಾಕೆ ಅಂತ ಮಾತ್ರ ಗೊತ್ತಿಲ್ಲ ...:(

ಕೊನೆಗೆ  ಕಿತ್ತಹೊಗಿರೋ Phone, Workಆಗದೆ ಇರೋ wi-fi modemನ ಕಿತ್ತಿ  ಒಂದು ಸಣ್ಣ coverಗೆ  ಹಾಕಿ ಅಟ್ಟದ ಮೇಲೆ ಬಿಸಾಕಿ ಸುಮ್ಮನಾಗಿಬಿಟ್ವಿ ….;) hahaha

ಇಷ್ಟೇ ಆದ್ರೆ ಈ  Article ಬರಿತಾನೆ ಇರಲಿಲ್ಲ, Story ಶುರು ಆಗೋದೇ ಇವಾಗ .....HaHaHa


RaajaMouli-Movie ಅಲ್ಲಿ  ನಾನಿ, ನೊಣ ಆಗಿ ಬಂದಂಗೆ , ಅಟ್ಟದಮೇಲೆ ಬಿದ್ದಿರೋ Instruments ನನ್ನ life ಅಲ್ಲಿ
Court Summons ಆಗಿ  ಬರುತ್ತೆ ಅಂತ ಯಾವತ್ತು ಅಂದುಕೊಂಡಿರಲಿಲ್ಲ  ... :( :( :(

ಹೌದು.....!!!
Developerಗೆ ಒಂದು ಕಾಲ ಆದ್ರೆ,  Testerಗೆ ಇನ್ನೊಂದು  ಕಾಲ ಅನ್ನೋ ಹಾಗೆ  .. ;)

BSNL Connection Use  ಮಾಡೇ ಇಲ್ಲಾ ಅಂದ ಮೇಲೆ BILL ಕಟ್ಟುತ್ತಿವ ನಾವು ...? ಇಲ್ಲ ತಾನೇ..!!!

Work ಆಗದೇ  ಇರೋ  ವ್ಯವಸ್ಥೆಗೆ ನಾವ್ಯಾಕೆ ಹೊಣೆ ಅನ್ನೋ ಹಾಗೆ , BSNL ಅವ್ರು ಕಳಿಸಿದ 6 ತಿಂಗಳ BILL ಎಲ್ಲಾನು Neglect ಮಾಡಿ Pay ಮಾಡಲೇ ಇಲ್ಲಾ .....So, Total ಆಗೀ 6393 INR Bill Amount... :(

ಇನ್ನೊಂದೆನದ್ರೆ , 2ನೆ ತಿಂಗಳಲ್ಲಿ Owner ಮನೆಗೆ Paint ಮಾಡಿಸ್ತಿರಬೇಕಾದ್ರೆ ಇದ್ದಿದ್ದ Wire ಕೂಡ Cut ಆಗಿ ಹೋಗಿತ್ತು.
ಅದನ್ನ ನಮ್ಮ Owner, ಮನೇಲಿ ಬಟ್ಟೆ ಒಣಗಿ ಹಾಕಕ್ಕೆ ಬೇಕು ಅಂತ ತಗೊಂಡು  ಹೋಗಿದ್ರು .... ;)hehehe

ಹಿಂಗೆಲ್ಲ ಆದ್ಮೇಲೆ ಯಾವನು ಗುರು BILL Pay ಮಾಡ್ತಾನೆ ...?

ನಾನು  ಮೊದಲೇ Aerotek ಇಂಜಿನಿಯರ್,  ;) ಕೆರ್ಕೊಲ್ಲೊಕ್ಕು ಟೈಮ್ ಇರಲ್ಲಾ, ಟೈಮ್ ಕೂಡ ಸಾಲ ತಗೋಬೇಕು ...HeHeHe,  ಅಂಥದ್ದರಲ್ಲಿ Aug -1 ಕ್ಕೆ ಲೋಕ-ಅದಾಲತ್ ಗೆ ಬರಬೇಕು ಅಂತಾ
Court Summons ಬಂತು ಮನೆಗೆ .... :(

School-college ಅಲ್ಲಿದ್ದಾಗ Scholarship letter ಬರ್ತಿತ್ತು,
Company ಸೇರಿದ ಮೇಲೆ Bank-Statement, Credit-Card Bill, Post-Paid Bill ಅಂತ ಬರುತ್ತೆ ,
ಆದ್ರೆ Court Summons ಕೂಡ ಬರೋ ಹಾಗಾಯಿತಲ್ಲ Life ಅಲ್ಲಿ ಅಂತ ಒಳಗೊಳಗೇ ಒಂಥರಾ ಅನುಭವ ... HaHaHa

ಗಾಳಿ ಗೊತ್ತೀಲ, ಗಂಧ ಗೊತ್ತಿಲ್ಲ, ಅಂಥದ್ರಲ್ಲಿ Court Summons ಬಗ್ಗೆ ಯಾವನಿಗೆ ಗೊತ್ತು. ಹಂಗು ಒಂದು ಸಲ ನೋಡೋಣ ಅಂತ Google ಮಾಡಿದೆ, Court Summons-Attend ಮಾಡಿಲ್ಲ ಅಂದ್ರೆ ಜೈಲ್ Guarantee ಅಂತ ಓದಕ್ಕೆ ಸಿಗ್ತು .... ;)
ಹಾಗೆ ಸುಮ್ಮನೆ ಗೊತ್ತಿರೋ ಒಬ್ಬ Close-Friend ಗೆ ಇ ತರಹ  ಆಗಿದೆ ಅಂತ ಹೇಳಿದೆ, ಅದಕ್ಕೆ ಅವನು,

"ಮಗ, Officeಗಿಂತ ಜೈಲ್ Best, ಸುಮ್ಮನೆ ಹೋಗು ಹೇಳ್ತೀನಿ" ಅಂತ Suggestion ಕೊಟ್ಟ .... :D ಒಂಥರಾ ನಿಜ ಅನಿಸ್ತು.. ;)

Child-hood ಫ್ರೆಂಡ್ ಒಬ್ಬ LLB ಓದುತ್ತಿದ್ದಾನೆ, ಅವನಿಗೆ ಕೇಳಿದ್ರೆ  "Attend ಮಾಡಿ ದುಡ್ಡು ಕಟ್ಟಿ, ಇಲ್ಲ Problem ಆಗುತ್ತೆ" ಅಂತ Suggest ಮಾಡಿದ.   

ಕೊನೆಗೆ Room-Mate's ಎಲ್ಲ ಕುಳಿತು ಯೋಚನೆ ಮಾಡಿ BSNL Officeಗೆ ಹೋಗೋಣ ಅಂತ Decide ಮಾಡಿದ್ವಿ... :(

ಶನಿವಾರ, Fresh ಆಗಿ ಸ್ನಾನ ಮಾಡಿ, ಬಂದಿರೋ Court Summons ಜೊತೆಗೆ BSNL ಬಿಲ್ ತಗೊಂಡು ಸಿದ Office ಗೆ ಹೋದ್ವಿ . ಒಂದು ಸತ್ಯ ಬೆಳಕಿಗೆ ಬಂತು ,

Finally i found the truth, ಅದೇನಪ್ಪ ಅಂದ್ರೆ, 

"Google might have invented the game called AngryBirds by watching BSNL's  billing and accounts department" ....hahahah So true...!!

ನಾವು ಯಾವ reason ಗೆ BSNL Officeಗೆ ಹೋಗಿದ್ವೋ, ಅಂಥವರ Q ತುಂಬಾನೇ ಉದ್ದ ಇತ್ತು ...... Hahahah

Biling section ಅಲ್ಲಿ  ಕೆಲಸ ಮಾಡೋರನ್ನ ನೋಡ್ತಿದ್ರೆ ಅಯ್ಯೋ ಪಾಪ ಅನ್ಸುತ್ತೆ, ಯಾಕಂದ್ರೆ ಅಲ್ಲಿ ಬಂದೋರೆಲ್ಲ Batting ಮಾಡೋರೆ ಯಾವದೋ Problem ಇಂದ ....

ನಮ್ಮ ಸರದಿ ಬಂದಾಗ , ಮಾತಾಡಿ ಮುಖಕ್ಕೆ ಉಗಿದು,  Regional incharge ಹತ್ರ ಹೋಗಿ settle ಮಾಡಿಕೊಂಡ್ವಿ... :)
1-ಕಾಲು ತಿಂಗಳಲ್ಲಿ Modemನ ನೆಲಕ್ಕೆ ಗುದ್ದಿ-ಗುದ್ದಿ use ಮಾಡಿದ್ದ 25GB ಗೆ 4000 INR ಕಟ್ಟಿ ಮನೆಗೆ ಬಂದ್ವಿ ...:(

ಅಟ್ಟದ ಮೇಲೆ ಬಿಸಾಕಿರೋ Instruments (phone& Wi-fi modem) ನ Return ಮಾಡಿದ್ರೆ Depositeಗೆ ಅಂತ ತಗೊಂಡಿರೋ ದುಡ್ಡು ವಾಪಸ್ ಕೊಡ್ತಾರಂತೆ cheque ರೂಪವಾಗಿ.....!!!

So, i am thinking that,
"can i expect the cheque from the Govt who issued me Court Summons...???" hahaha

So think-think-think (enough thrice..;) before going to BSNL connection………….!!!!

Saturday, March 10, 2012

ನಿನ್ನ ಸಹವಾಸವೇ............!!!!!!







ನಿನ್ನ  ಸಹವಾಸವೇ, ನನ್ನ  ಆಲಾಪನೆ ,
ನಿನ್ನ  ಸಂತೋಷವೇ , ನನ್ನ  ಸಂಪಾದನೆ ,
ನಿನ್ನಲ್ಲಿ   ನನ್ನನ್ನು , ನಿನಗಾಗೆ  ನಾನೆಂದು ,
ನನ್ನ  ಪ್ರೀತಿ  ಪುಸ್ತಕದಾ  ಪ್ರತಿ  ಹಾಳೆ  ನೀನೆಂದು ….!!!!

ನಿನ್ನ  ಆ  ಕಣ್ಣೋಟ , ದೇವತೆಯ  ಮೈಮಾಟ ,
ಒಮ್ಮೆಲೇ  ಹಸಿರಾಯಿತು  ನನ್ನ  ಎದೆಯ  ತೋಟ ..,
ನಿನ್ನ  ಸುಂದರ  ಮುಖದಿ ,  ನಗುವ  ರವಿ  ನಾನಾಗಿ ,
ಕಾಂತಿಯ  ನಗೆ  ಬಿರಿ , ಇರಲೇನು  ಜೊತೆಯಾಗಿ ………!!!!

7 ಬಣ್ಣವು  ಸೇರಿ , ಆಯಿತು  ಕಾಮನಬಿಲ್ಲು ,
ಆ  ಸೊಬಗು  ನಿನ್ನಲ್ಲಿ  , ಹೇಗೆ  ಬಂತು  ಹೇಳು ,
ಹುಡುಕುತ್ತ  ನಿನ್ನ  ಹೆಜ್ಜೆ , ಹೊರಟಿರುವೆ  ಕಾಲು  ದಾರಿ ,
ತಿಳಿಯದು  ನಿನ್ನ  ದುರಾ , ಕಾಣಿಸು  ಒಂದು  ಬಾರಿ …!!!!!

ರಚನೆ : ಮಹೇಶ್ ಏನಾಪುರೆ
ಗಾಯಕ:  ಸಂದೀಪ್ ಶೆಟ್ಟಿ
ಶುಭ ಕೋರುವವರು : ಅನಿಲ್ G  ನ, ಅರ್ಜುನ್ M , ಕಾರ್ತಿಕ್ N............:) 


Saturday, January 21, 2012

ಸುಮ್ಮನೆ ನಗುತಾ........!!!! ಹೋಗು ಮುಂದೆ...... :):)







ಸುಮ್ಮನೆ  ನಗುತಾ  ಹೋಗು  ಮುಂದೆ , life ಅಂದ್ರೆ  ಹಿಂಗೆ  ತಂದೆ ..!!!!
ನಡಿ ಮಗ  ನಡಿ  ಮಗ  ಇದ್ದಿದ್ದೆ , ಇ Life ಅಲ್ಲಿ  ಆಗೋದು  ಬರ್ದಿದ್ದೆ ..!!!
(Life ಇಷ್ಟೇ  ಗುರು) JJ



Gym body, Pulsar ಗಾಡಿ , ಖಾಲಿ  road ಅಲ್ಲಿ  ಒಂಟಿ  lady,
Road  ಅಲ್ಲಿ  ಬಂದ  hump ನೋಡಿ , ಹಂಗೆ  ಜೋರಾಗಿ  horn ಮಾಡಿ ,
ಕಣ್ಣಿಗೆ   glaassu , ಕೈಗೆ  glowsu , ಕಾಲ್ಗೆ  shoes , ಕೊರಳಲ್ಲಿ  ಹಾರ ,
ಭಾನುವಾರ,  ಗಾಡಿ  ಭಾರ , ಕೆಳಗೆ  ಬಿದ್ರೆ  ಆಸ್ಪತ್ರೆ  ದ್ವಾರ ,
ಏನು  ತಿಳಿಯದೆ , ಗೊತ್ತೇ  ಆಗದೆ , ಹೋಗಿ  ಗುದ್ದಿದೆ  ಒಂಟಿ  ladyಗೆ ,
ಏನು  ಹಿಂಗೆ , ಮುಂದೆನಂದೆ , side ಗೆ  ಕರೆದು  ಕೊಟ್ಟ್ಲೊಂದು  ಮುತಿಗೆ….:D:D(che)JJ


ಸುಮ್ಮನೆ  ನಗುತಾ  ಹೋಗು  ಮುಂದೆ , life ಅಂದ್ರೆ  ಹಿಂಗೆ  ತಂದೆ ..!!!!
ನಡಿ ಮಗ  ನಡಿ  ಮಗ  ಇದ್ದಿದ್ದೆ , ಇ Life ಅಲ್ಲಿ  ಆಗೋದು  ಬರ್ದಿದ್ದೆ ..!!!
(Life ಇಷ್ಟೇ  ಗುರು )JJ


long ride, lake side, ಬಿಸಿಲ  road ಅಲ್ಲಿ  bike ಗೈಡು,  
ಮೇಲೆ  ಕೋಟು , ಒಳಗೆ  shirtu  , ಕಾಲು  ಮುಚ್ಹಿದ  whitu ಭೂಟು ,
biku ಬೋರು , ಗಾಳಿ  ಜೋರು , stand ಹಾಕಿ  ಹಾಡಿದೆ  songu,
ತಂಪು  ನಿರು , ಮೈಗೆ  ಸೋಕಲು , ಆಗಿ  ಬಿಟ್ಟೆ  full wrongu,
ಬೆಂಕಿ  ಇಜು , full ಮೋಜು , ಮಾಡಿ  ಮೇಲೆ  ಬಂದೆನು,
ದಡದಲ್ಲಿಟ್ಟ  ನನ್ನ  ಬಟ್ಟೆ , ಒಯ್ದು  ಬಿಟ್ಟಿದೆ  ಮಂಗನು ...!!! :D:D(che)JJ


ಸುಮ್ಮನೆ  ನಗುತಾ  ಹೋಗು  ಮುಂದೆ , life ಅಂದ್ರೆ  ಹಿಂಗೆ  ತಂದೆ ..!!!!
ನಡಿ ಮಗ  ನಡಿ  ಮಗ  ಇದ್ದಿದ್ದೆ , ಇ Life ಅಲ್ಲಿ  ಆಗೋದು  ಬರ್ದಿದ್ದೆ ..!!!
(Life ಇಷ್ಟೇ  ಗುರು) JJ


Frnds ಪಾರ್ಟಿ , ಲೇಟ್  night, ಹಿಂಗೆ  bikealli ಹೋಗುತಿದ್ದೆ ,
Full zoom, ಹೊಸ  ಹಾಡು , ಕಿವಿಗೆ  ತಂಪು  ಕೆಳುತಿದ್ದೆ ,
ಕೈ  ಒಂದು  , lift ಕೇಳಲು  full confuse ಅಲ್ಲಿ  ಬಿದ್ದೆ 
Break ಹಾಕಿ , gear ತಗೆದು , ಹಿಂದೆ  ಹತ್ತಿಸಿ  ಜೈ  ಅಂದೇ ,
ಸ್ವಲ್ಪ ದೂರ , ಹೋಗಿದಂಗೆ , ಕತ್ತಿ  ಬಂತು  ಕತ್ತಿಗೆ ….:(
ಹೊಸ  ipod, ಚಿಂದಿ  biku, ಕಿತ್ತ್ಕೊಂಡು  ಕಳಿಸಿದ  ಮನೆಗೆ …!!!! :D:D(che)JJ


ಸುಮ್ಮನೆ  ನಗುತಾ  ಹೋಗು  ಮುಂದೆ , life ಅಂದ್ರೆ  ಹಿಂಗೆ  ತಂದೆ ..!!!!
ನಡಿ ಮಗ  ನಡಿ  ಮಗ  ಇದ್ದಿದ್ದೆ , ಇ Life ಅಲ್ಲಿ  ಆಗೋದು  ಬರ್ದಿದ್ದೆ ..!!!
(Life ಇಷ್ಟೇ  ಗುರು ) JJ