ತುಂಬಾ ಹಳೆ ಭಾಷೆ ನಮ್ದುಲಾ ..... ಕನ್ನಡ , ಕನ್ನಡ
ಮನಸು ಬಿಚ್ಚಿ ಒಮ್ಮೆ ಮಾತಾಡಲಾ ..... ಕನ್ನಡ , ಕನ್ನಡ
ನಮ್ಗೆಂಟು ಜ್ಞಾನಪೀಠ ಬಂತಲಾ ..... ಕನ್ನಡ , ಕನ್ನಡ
ಕನ್ನಡಾಗ್ ಹೋರಾಡಿದವರಿಗೆ ಮರಿಬೇಡ್ಲಾ....... ಕನ್ನಡ , ಕನ್ನಡ
ನಮ್ ತಾಯಿ ಭುವನೇಶ್ವರಿ , ನಮ್ ಭಾಷೆ ಭಾರೀ ಅದರಿ,
ಕಾವೇರಿ ನೀರು ನಮಗಂತ ಹರಿವ ಧರೆಗಿಳಿದ ಅಮ್ರತಾರ,
ಗಂಧದ ಬಿಡು ಕಣ್ರೀ , ಮಲೆನಾಡ ಸೊಬಗ ನೋಡ್ರಿ ,
ಮುದ್ದೇನ ತಿಂದು, ರೊಟ್ಟಿನ ಅಗೆದು , ಒಂಥರಾ ಚೆಂದ ಬಿಡ್ರಿ .....||..... ಕನ್ನಡ , ಕನ್ನಡ ....||
ಎಂತಾ ಮಾರಾಯರೇ , ಮಂಡೇ ಬಿಸಿಯಾಯ್ತುರಿ,
ಬಂದ್ರುನು ಕನ್ನಡ ಮಾತಾಡದೆ ಸ್ವಲ್ಪ ಗಾಂಚಲಿ ಆಡ್ತಿರಲ್ರಿ,
ಎರಡರ್ಧ ಕಾಫೀ ಕೊಡ್ರಿ , ಪ್ರೀತಿಯ ಸಕ್ಕರೆ ಹಾಕಿ,
ಸ್ನೇಹಕ್ಕು ಸಿದ್ಧ , ಸಮರಕ್ಕೂ ಬದ್ಧ , ನಮ್ ತವ ಇಟ್ಕೋಬೇಡ್ರಿ.... ||..... ಕನ್ನಡ , ಕನ್ನಡ ....||
ರಚನೆ:
ಮಹೇಶ್ ಐನಾಪುರೆ....!!
ಸಂಗಿತ, ಹಿನ್ನೆಲೆ ಗಾಯಕರು & ಪ್ರೋತ್ಸಾಹಕರು :
ಅನೀಲ್ ಮೂರ್ತೀ, ಅರ್ಜುನ್ ಮೇಡ, ಸಂದೀಪ್ ಶೆಟ್ಟಿ, ಅಕ್ಷಯ್ ಮೇಡ