Saturday, March 9, 2013

ವಿಸ್ಮಯ ಓಲವಿದು....!!





ಸಾಹಿತ್ಯ, ಸಂಗೀತ , ಸಂಕಲನ  : ಮಹೇಶ್ ಇನಾಪುರೆ
ಕಂಠದಾನ  : ಕಾರ್ತಿಕ್ ಮೂರ್ತಿ
ಹಿನ್ನೆಲೆ  ಸಂಗೀತ : ಮಾರ್ಷಲ್  ಕೆ  ಥಾಮಸ್ .
ತಾಂತ್ರಿಕ ನಿರ್ವಹಣೆ  : ಅನಿಲ್  ಮೂರ್ತಿ , ಮೇಡ Bros,  ಸಂದೀಪ್ ಶೆಟ್ಟಿ


ಧನ್ಯವಾದಗಳು ........................  :)


Female Version :

ಅಂತರ ನಿರಂತರ ಪ್ರತಿ ಘಳಿಗೆಯೂ ಇರುವೆ ಹತ್ತಿರ
ಸುಂದರ ಅತಿ ಸುಂದರ ನನ್ನ ಬಾಳಿಗೆ ನೀ ಚಂದಿರ,
ನನ್ನ ಗಮನವು ಬದಲಾಗಿದೆ
ನಿನ್ನ ನೆನಪಲೆ ದಿನ ಸಾಗಿದೆ,
ನಿಜ ಹೇಳಲೇ ನಿನಗೊಂದು , ನಿನೇನೇ ನನ್ನ ಕಣ್ಣ ಬಿಂದು  ।। ೧।।

ಯಾರೋ ನನ್ನ ಹೆಸರ್ನು ಕರೆದಿರೋ ಹಾಗನಿಸಿದೆ
ಕರಣವು ನಿನ್ನ ಕೂಗಿಗೆ ಕಾತುರದಿ ಕೇಳಬಯಸಿದೆ
ನೀ  ಕೊಟ್ಟ  ಕಾಲುಗೆಜ್ಜೆ  ದುರುತಿದೆ ಪದೇ ಪದೇ
ಕಿರುಬೆರಳ ಹಿಡಿದು ನೀ ನಡೆಸು  ಈ ಹೃದಯ ಕಾದಿದೆ
ನಿಜ ಹೇಳಲೇ ನಿನಗೊಂದು , ನಿನೇನೇ ನನ್ನ ಕಣ್ಣ ಬಿಂದು  ।। ೨।।

ದೇವರ ಹುಡುಕಲು ಕಣ್ಣೆದುರಿಗೆ ನೀ ಬಂದಿಹೆ
ಅವನಲಿ ಇಟ್ಟ ಪ್ರಶ್ನೆಗೆ ಉತ್ತರ ನಿನ್ನ ಪ್ರೀತಿಯೇ
ಇನ್ನೇನು ಬೇಕು ನನಗೆ ಈ ಬಾಳ ಸಾಗರದಿ
ನೀನಾದೆ ನನ್ನ ನೌಕೆ ವಾತ್ಸಲ್ಯದಾಗಸದಿ
ನಿಜ ಹೇಳಲೇ ನಿನಗೊಂದು , ನಿನೇನೇ ನನ್ನ ಕಣ್ಣ ಬಿಂದು  ।। ೩।।