Wednesday, November 12, 2014

ಬೀದರ್ -- ಪ್ರವಾಸ


ವಾಚಕರೆ,  ಕರ್ನಾಟಕ ರಾಜ್ಯದ ಕಿರೀಟ ಎಂದೇ ಹೆಸರಾಗಿರುವ, ಉತ್ತರ-ಕರ್ನಾಟಕದ ತುದಿ ಎಂದೇ ಅನಿಸಿರುವ  ಬೀದರ್ ಜಿಲ್ಲೆಯ ಬಗ್ಗೆ ತಿಳಿದುಕೋಳ್ಳೋಣ ಅಲ್ಲದೆ ಅಲ್ಲಿರುವ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಮಾಹಿತೀ ಪಡೆಯೋಣ.

ಬೀದರ್ :- 


ಬೀದರ್ ಜಿಲ್ಲೆಯು ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಸರಿ ಸುಮಾರು 700 km ದೂರದಲ್ಲಿದೆ . ನಾವು ಬಸ್ ಮತ್ತು  ಟ್ರೈನ್ ಮುಖಾಂತರ ಅಲ್ಲಿಗೆ ತಲುಪಬಹುದು. ಸುಮಾರು 12 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ.  ಉರ್ದು, ಕನ್ನಡ, ತೆಲುಗು ಮತ್ತು ಮರಾಠಿ ಗಳಂತಹ ಭಾಷೆಗಳ ಸಮ್ಮಿಶ್ರಣವನ್ನು ಮಾಡಿ ಒಂದು ಅದ್ಭುತ ಗಡಿ ಭಾಷೆಯ ಕನ್ನಡ ವನ್ನು ಮಾತನಾಡಲಾಗುತ್ತದೆ. ಮಹಾರಾಷ್ಟ್ರ ಮತ್ತು ತೆಲಾಂಗಣ ಕೇವಲ 30 km ದೂರದಲ್ಲಿದ್ದು ಹೈದರಾಬಾದ್ ನಿಂದ ಸುಮಾರು 150 km ಗಳ ದೂರದಲ್ಲಿದೆ.

೧೪ನೆ ಶತಮಾನದಲ್ಲಿ ಬಹುಮನಿ ಸುಲ್ತಾನರ ರಾಜ್ಯಧಾನಿ ಯಾಗಿದ್ದ ಬೀದರ್ ಜಿಲ್ಲೆಗೆ ಬೀದರ್ ಅಂತ ಹೆಸರು ಬಂದಿದ್ದು ಅಲ್ಲಿನ ಪುರಾತನ ಕಲೆಯಾದ ಬಿದ್ರಿ ಕರಕುಶಲತೆಯಿಂದ. ಇಂದಿಗೂ ಇಲ್ಲಿ ಬಿದ್ರಿ ಆಕೃತಿಗಳನ್ನು ಮಾಡಿ ಮಾರಾಟ ಮಾಡಲಾಗುತ್ತದೆ .

ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.

 ಬಿಸಿಲು ನಾಡು ಬಿದರಿನಲ್ಲಿ ತುಂಬಾ ತಂಪಾದ, ಅದ್ಭುತವಾದ, ಇತಿಹಾಸಮಯವಾದ ಪ್ರೇಕ್ಷಣಿಯ ಸ್ಥಳಗಳಿರುವುದು ಒಂದು ಸಂತೋಷಕರ ವಿಷಯ.ಬಹುಮನಿ ಸುಲ್ತಾನರು ಅಲ್ಲದೆ ಕಲ್ಯಾಣದ ಚಾಲುಕ್ಯರು ಸೇರಿ ಮುಂತಾದ ದೇವಸ್ಥಾನಗಳ ನಿರ್ಮಾಣ ಮಾಡಿರುವುದು ವಿಶೇಷ ಸಂಗತಿ. ಇತ್ತೀಚೆಗೆ ನಡೆದ ಸರ್ವೇ ಪ್ರಕಾರ ಬೀದರ್ ಭಾರತದ 22 ನೇ ಸ್ವಚ್ಛನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರವೆಂಬ ಸ್ಥಾನ ಪಡೆದುಕೊಂಡು ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೀದರ್ ನಲ್ಲಿ IAF Training Base ನೆಲೆಸಿರುವುದಲ್ಲದೆ , ನಗರದ ಮಧ್ಯ ಭಾಗದಲ್ಲಿ ರೈಲ್ವೆ ನಿಲ್ದಾಣವಿದೆ. KSRTC ಬಸ್ ನಿಲ್ದಾಣಕ್ಕೂ ಮತ್ತು ರೈಲ್ವೆ ನಿಲ್ದಾಣಕ್ಕೂ ಸುಮಾರು 2km ಗಳ ಅಂತರವಿದೆ . ಮಾಂಜ್ರಾ ನದಿಯು ಬೀದರ್ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಯಾಗಿದೆ. ಬೀದರ್ ನಿಂದ ಸುಮಾರು 15km ಅಂತರದಲ್ಲಿ ಕಾರಂಜ ಆಣೆಕಟ್ಟು ಕಟ್ಟಲಾಗಿದೆ .

ಭೇಟಿ ನಿಡಲೇ ಬೇಕಾದ ಬೀದರ್ ಜಿಲ್ಲೆಯ ಕೆಲವು ಪ್ರೇಕ್ಷಣಿಯ ಸ್ಥಳಗಳು :

ಗುರು ನಾನಕ ಝೀರ, ಪಾಪನಾಶ ಶಿವನ ದೇವಸ್ಥಾನ, ನರಸಿಂಹ ಝೀರ, ಬೀದರ ಕೋಟೆ, ಹುಮನಾಬಾದ್ ತಾಲೂಕಿನ ಮಾಣಿಕನಗರ್, ಬಸವಕಲ್ಯಾಣದ ಕೋಟೆ, ಅನುಭವ ಮಂಟಪ, ಬಸವೇಶ್ವರರ ಮಂದಿರ, ೧೦೮ ಅಡಿ ಎತ್ತರದ ಬಸವ ಮೂರ್ತಿ ಮತ್ತು  ಅಮೃತಕುಂಡ.

ಗುರು ನಾನಕ ಝೀರ : 

ಇದು ಸಿಕ್ಖರ ಪವಿತ್ರ ಸ್ಥಳವಾಗಿದ್ದು, ಇದನ್ನು ಗುರುದ್ವಾರ ಎಂದು ಕರೆಯಲಾಗುತ್ತದೆ.  ಇ ಗುರುದ್ವಾರವು  ಸಿಕ್ಖರ ಧಾರ್ಮಿಕತೆಗೆ ಮತ್ತು ಅವರ ಪರಂಪರೆಗೆ ಅನುಗುಣವಾಗಿ ನಿರ್ಮಿಸಲಾಗಿದ್ದು ಇದನ್ನು ಸಿಕ್ಖರ ಪ್ರಥಮ ಗುರುಗಳಾದ ಗುರು ನಾನಕರಿಗೆ ಅರ್ಪಿಸಲಾಗಿದೆ. ಗುರುದ್ವಾರದ ಒಳಗಡೇ ಪ್ರವೇಶಿಸಬೇಕಾದರೆ ಶಿರದ ಮೇಲೆ ವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದಲ್ಲದೆ , ಪಾದಗಳನ್ನು ನೀರಿನಲ್ಲಿ ನೆನೆಸಿ ಒಳಗಡೆ ಹೋಗುವ ಪರಂಪರೆಯನ್ನು ಅನುಸರಿಸಲಾಗುತ್ತದೆ. ಗುರುದ್ವಾರದ ಒಳಗಡೆ ಸಿಕ್ಖರ ಪವಿತ್ರ ಧರ್ಮಗ್ರಂಥವಾದ  
"ಗುರು ಗ್ರಂಥ್ ಸಾಹೇಬ್" ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಇತಿಹಾಸ :   ಗುರುನಾನಕರು ಧರ್ಮ ಪ್ರಚಾರದ ಸಮಯದಲ್ಲಿ ಬೀದರ್ ಗೆ ಬಂದು ನೆಲೆಸಿದ್ದಲ್ಲದೆ , ತಮ್ಮ  ದಿವ್ಯಜ್ಞಾನ ದಿಂದ ಬಳಿಗೆ ಬಂದ ಭಕ್ತರ ಕಷ್ಟ -ಕಾರ್ಪಣ್ಯಯಗಳನ್ನು ಬಗೆಹರಿಸಿದರು. ಬಯಲುಸೀಮೆಯ ಪ್ರದೇಶವಾದ ಬೀದರ ಜಿಲ್ಲೆಯಲ್ಲಿ ನೀರಿನ ಬರವಿದ್ದರಿಂದ ಎಲ್ಲ ಕಡೆ ನೀರಿಗಾಗಿ ಪರದಾಡುತ್ತಿದ್ದ ಸಮಯವದು. ಎಲ್ಲಿ ಬಾವಿ ತೊಡಿದರು ಕುಡಿಯಲು ಯೋಗ್ಯವಾದ ನಿರು ದೊರಕದಾಗಿತ್ತಂತೆ .  ಆ ಸಮಯದಲ್ಲಿ ಗುರುನಾನಕರು ಬೆಟ್ಟದ ಒಂದು ಭಾಗಕ್ಕೆ ಬಂದು ದೇವರ ನಾಮಸ್ಮರಣೆ ಮಾಡುತ್ತಾ ತಮ್ಮ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ತಾಗಿಸಿ, ಮಣ್ಣಿನ ಮೇಲ್ಭಾಗವನ್ನು ಸ್ವಲ್ಪ ಕದಡಿದ್ದರಿಂದ ಅಲ್ಲಿ ಪವಿತ್ರವಾದ, ತಿಳಿಯಾದ ಕುಡಿಯೂವ ನೀರಿನ ಕಾರಂಜಿ ಉಂಟಾಯಿತು ಎನ್ನುವ ಪ್ರತೀತಿ. ಇದರಿಂದಾಗಿ ಇ ಪವಿತ್ರ ಸ್ಥಳಕ್ಕೆ "ನಾನಕ ಝೀರ" ಎಂದು ಹೆಸರಿಡಲಾಗಿದೆ. ಇಂದಿಗೂ ಇಲ್ಲಿ ಸತತವಾಗಿ ನೀರಿನ ಝರಿ ಹರಿಯುತ್ತದೆ. ಬಂದವರೆಲ್ಲ ಇ ನೀರನ್ನು ಸೇವಿಸುತ್ತಾರೆ. ಇದನ್ನು ತುಂಬಾ ಪವಿತ್ರ ಸ್ಥಳವೆಂದು ತಿಲಿಯಲಾಗಿದ್ದಲ್ಲದೆ, ಇ ನೀರನ್ನು ಸೇವಿಸುವುದರಿಂದ ನಮ್ಮ ಪಾಪ - ಕರ್ಮ ಗಳೆಲ್ಲವು ಕಳೆಯುವುದೆಂಬ ಪ್ರತೀತಿ ಇದೆ.  ಇಲ್ಲಿಂದ ಹರಿದು ಬಂದ  ನೀರನ್ನು ಗುರುದ್ವಾರದ ಮುಂದೆ ಇರುವ ಕಲ್ಯಾಣಿಗೆ ಬಿಡಲಾಗಿದೆ. ಇ ಕಲ್ಯಾಣಿಯಲ್ಲಿ ಭಕ್ತರು ಮಿಂದು ದೇವರ ದರ್ಶನ ಪಡೆಯುತ್ತಾರೆ . ದೇವಸ್ಥಾನದ ವಸತಿ ಗೃಹಗಳಿದ್ದು ಬಂದವರಿಗೆ ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ.

ದೇವಸ್ಥಾನವು ತುಂಬಾ ಶುಚಿಯಾಗಿ ಮತ್ತು ಉತ್ತಮವಾಗಿ ನೋಡಿಕೊಳ್ಳಲಾಗಿದೆ. ದೇವಸ್ಥಾನ ಪ್ರದೇಶದ ಸುತ್ತಮುತ್ತಲು ತುಂಬಾ ಹಸಿರಿನ ವಾತಾವರಣವಿದ್ದು, ಇಲ್ಲಿ ನಿರ್ಮಿಸಲಾಗಿದ್ದ ಹೂದೋಟ ಮತ್ತು ಉದ್ಯಾನವನ ಪ್ರೇಕ್ಷಕರ ಮನಸೆಳೆಯುತ್ತದೆ.

ಮಾರ್ಗ:  ಗುರುದ್ವಾರವು ಬೀದರನ ಉತ್ತರ ಭಾಗಕ್ಕೆ ನೆಲೆಸಿದ್ದು, KSRTC ಬಸ್ ನಿಲ್ದಾಣದಿಂದ ಸುಮಾರು 4km ದೂರದಲ್ಲಿದೆ. ಬಸ್ ನಿಲ್ದಾಣದ ಹೊರಗಡೆ ಸಿಗುವ ಆಟೋ ಮುಖಾಂತರ ಇಲ್ಲಿಗೆ ತಲುಪಬಹುದಾಗಿದೆ.

ನರಸಿಂಹ ಝೀರ:

ಭಾರತದಲ್ಲಿಯೇ ಅತೀ ವೈಶಿಷ್ಟ್ಯತೆ ಹೊಂದಿರುವ ದೇವಸ್ಥಾನವು ಇದಾಗಿದೆ. ಇದು ಶ್ರೀ ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ಅವತಾರದ ದೇವಸ್ಥಾನವಾಗಿದೆ. ಇ ದೇವಸ್ಥಾನದ ವೈಶಿಷ್ಟ್ಯತೆ ಏನೆಂದರೆ ನರಸಿಂಹ ದೇವರ ದರ್ಶನ ಪಡೆಯಲು ಭಕ್ತಾದಿಗಳು ಸುಮಾರು 500m ಗಳಷ್ಟು ಅಂತರವನ್ನು ನಿರು ತುಂಬಿದ ಗುಹೆಯೊಳಗೆ ನಡೆದುಕೊಂಡು ಹೋಗಬೇಕಾಗುತ್ತದೆ . ಸುಮಾರು ೪ ಅಡಿ ಎತ್ತರದ ನಿರು ಯಾವಾಗಲು ಗುಹೆಯೊಳಗೆ ಹರಿಯುತ್ತಿರುತ್ತದೆ. ಒಳಗಡೆ ಗಾಳಿಯಾಡಲು ಪೈಪ್ ನ ವ್ಯವಸ್ಥೆ ಮಾಡಲಾಗಿದೆ. ಗುಹೆಯ ಎಲ್ಲ ಭಾಗದಲ್ಲೂ ಬಾವಲಿ (bat) ಗಳು ಅಂಟಿಕೊಂಡಿರುವುದುದಲ್ಲದೆ ಯಾರಿಗೂ ಏನು ಹಾನಿ ಉಂಟು ಮಾಡುವುದಿಲ್ಲ .ತುಂಬಾ ಜನ ಭಕ್ತಾದಿಗಳು ತಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬಂದು ಮಡಿ ಉಟ್ಟು , ನೈವೇದ್ಯವನ್ನು ಮಾಡಿ ದೇವರಿಗೆ ಅರ್ಪಿಸುವುದು ವಿಶೇಷ.

ಇತಿಹಾಸ :  ಹಿರಣ್ಯಕಶಪುವಿನ ವಧೆಯ ಬಳಿಕ ನರಸಿಂಹನು ಶಿವ ಭಕ್ತನು ಮತ್ತು ಅಸುರನು ಆದ "ಜಲಾಸುರ" ನ ವಧೆ ಮಾಡಲು ಬರುತ್ತಾನೆ. ಯುದ್ಧದ ಬಳಿಕ ಜಲಾಸುರನು ಸೋಲನ್ನೋಪ್ಪಿ, ಸಾವನ್ನೋಪ್ಪುವಾಗ ನರಸಿಂಹನ ಕಾಲು ಹಿಡಿದು ಇಲ್ಲಿಯೇ ವಾಸಮಾಡಿ ಬಂದ  ಭಕ್ತರಿಗೆ ಆಶಿರ್ವಾದ ಮಾಡುವಂತೆ ವರ ಕೇಳಿ ಕೊಳ್ಳುತ್ತಾ ನರಸಿಂಹನ ಪಾದದಿಂದ ನೀರಾಗಿ ಹರಿಯಲು ಶುರುಮಾಡುತ್ತಾನೆ. ಅವನಿಗೆ ಕೊಟ್ಟ ಮಾತಿನಂತೆ ದೇವರು ಗುಹೆಯೊಳಗೆ ಐಕ್ಯವಾದರೆಂದು ಪ್ರತೀತಿ.  ನರಸಿಂಹನ ಪಾದದಿಂದ ನೀರು ಸತತವಾಗಿ ಸುರಿಯುವುದರಿಂದಲೇ ಇ ಸ್ಥಳಕ್ಕೆ "ನರಸಿಂಹ ಝೀರ" ಎಂದು ಹೆಸರಿಡಲಾಗಿದೆ.

ಇ ಪವಿತ್ರವಾದ ಕ್ಷೇತ್ರದಲ್ಲಿ,  500m ನೀರಿನೊಳಗೆ ಗುಹೆಯಲ್ಲಿ ನಡೆದುಕೊಂಡು ಹೋಗಿ , ಹಸಿಯಾದ ಮೈಯಿಂದ ನರಸಿಂಹನ ದರ್ಶನ ಪಡೆದು ಭಕ್ತರು ಪಾವನರಾಗುತ್ತಾರೆ. ದೇವಸ್ಥಾನವು ಬೆಟ್ಟದ ಇಳಿ ಜಾರು ಪ್ರದೇಶದಲ್ಲಿ ನಿರ್ಮಿಸಲಾಗಿರುವುದು ಇನ್ನೊಂದು ವಿಶೇಷ.

ಮಾರ್ಗ:  ನರಸಿಂಹ ಝೀರ ದೇವಸ್ಥಾನವು ಬೀದರನ ಪೂರ್ವ ಭಾಗಕ್ಕೆ ನೆಲೆಸಿದ್ದು, KSRTC ಬಸ್ ನಿಲ್ದಾಣದಿಂದ ಸುಮಾರು 10km ದೂರದಲ್ಲಿದೆ. ಬಸ್ ನಿಲ್ದಾಣದ ಹೊರಗಡೆ ಸಿಗುವ ಆಟೋ ಮುಖಾಂತರ ಇಲ್ಲಿಗೆ ತಲುಪಬಹುದಾಗಿದೆ. ಅಲ್ಲದೆ ಸಿಟಿ ಬಸ್ ಗಳ ಮುಖಾಂತರ ಕೂಡ ತಲುಪಬಹುದಾಗಿದೆ.

ಬೀದರ್ ಕೋಟೆ : 

ಬೀದರ್ ಕೋಟೆಯು ಭಾರತದ ಬಹು ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇಲ್ಲಿ ಅತಿಯಾಗಿ ಬಹುಮನಿ ಸುಲ್ತಾನರು ಆಳ್ವಿಕೆ ಮಾಡಿದ್ದರಿಂದ ಇಲ್ಲಿ ಪರ್ಷಿಯನ್ ಕಲೆಗಳು ತುಂಬಾ ನೋಡಲು ಸಿಗುತ್ತವೆ. ಕೋಟೆಯ ಅದರ ಒಳ ಭಾಗದಲ್ಲಿರುವ ಅದರ ಬಣ್ಣ-ಬಣ್ಣದ ಗೋಡೆಗಳಿಂದ ಜಗತ್ಪ್ರಸಿದ್ಧಿಯಾಗಿದೆ. ಬಹುಮನಿ ಸುಲ್ತಾನರ ರಾಜಧಾನಿಯಾಗಿದ್ದ ಸಂಧರ್ಭದಲ್ಲಿ ನಿರ್ಮಾಣವಾಗಿದ್ದ ಮಸ್ಜಿದಗಳು - ಮಹಲುಗಳು ಅವುಗಳ ಕಟ್ಟಡಗಳ ಶೈಲಿಯಿಂದ ವಿಶ್ವ ವಿಖ್ಯಾತಿಯನ್ನು ಪಡೆದಿವೆ.

ರಂಗಿನ ಮಹಲ್ :- ಬಣ್ಣ -ಬಣ್ಣದ ಗೋಡೆಗಳಿಂದ ನಿರ್ಮಿಸಿದ ಕಟ್ಟಡ.
ತರ್ಕಶ್ ಮಹಲ್ :- ಮಹಾರಾಜನು , ಟರ್ಕಿಯ ಮಹಾರಾಣಿಗೋಸ್ಕರ ನಿರ್ಮಿಸಿದ ಕಟ್ಟಡ.
ಗಗನ್ ಮಹಲ್  :-  ಬಹುಮನಿ ಸುಲ್ತಾನರು ಮೊದಲಾಗಿ ಕಟ್ಟಿದ ಕಟ್ಟಡವನ್ನು ಬರಿದಷಾ ಸುಲ್ತಾನರು ಅಧಿಕಾರಕ್ಕೆ ಬಂದ ನಂತರ ಇನ್ನಷ್ಟು ಅಭಿವೃದ್ಧಿ ಪಡಿಸಿದ ಕಟ್ಟಡ.
ತಖ್ತ್ ಮಹಲ್  :- ಬಹುಮನಿ ಸುಲ್ತಾನರ ಮಹಾರಾಜನು ವಾಸವಾಗುತ್ತಿದ್ದ  ಕೊಠಡಿ ಎಂದು ಗುರುತಿಸಲಾಗುತ್ತದೆ.
ಮದರಸಾ ಆಫ್ ಮೊಹಮ್ಮದ ಗವಾನ್  :- ಇದು ಖ್ವಾಜಾ ಮೊಹಮ್ಮದ್ ಗವಾನ್ ರು ನಿರ್ಮಿಸಿದ ಆಗಿನ ಕಾಲದ ವಿಶ್ವ ವಿದ್ಯಾಲಯ. ಇಲ್ಲಿ ವಿದ್ಯಾರ್ಥಿಗಳಿಗೆ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಬೋಧನೆ ಮಾಡಲಾಗುತ್ತಿತ್ತು. ಇಲ್ಲಿ ಉಚಿತವಾಗಿ ಶಿಕ್ಷಣವನ್ನು ಕೊಡಲಾಗುತ್ತಿತ್ತು ಅಲ್ಲದೆ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿತ್ತು.
ಚೌಬಾರಾ  :- ಇದು ಬೀದರ್ ನ ಮಧ್ಯ ಭಾಗದಲ್ಲಿ ನಿರ್ಮಿಸಲಾದ ಉದ್ದನೆಯ ಚತುರ್ಮುಖದ ಕಲ್ಲಿನ ಗೋಪುರ. ನಾಲ್ಕು ದಿಕ್ಕಿಗೆ ಗಡಿಯಾರವನ್ನು ಅಳವಡಿಸಲಾಗಿರುತ್ತದೆ.
ಸೋಲಾ ಖಂಬಾ ಮಸ್ಜಿದ್ :- ಇ ಕಟ್ಟಡವು  ವಿಶಿಷ್ಟವಾಗಿದ್ದು 16 ಖಂಬಗಳನ್ನು ಹೊಂದಿದೆ. ಹಾಗಾಗಿ ಇದನ್ನು ಸೋಲಾ ಖಂಬಾ ಮಸ್ಜಿದ್ ಎಂದು ಕರೆಯಲಾಗುತ್ತದೆ.

ಮಾರ್ಗ: ಕೋಟೆಯು ಬೀದರ್ ನ ಪೂರ್ವ ಭಾಗದಲ್ಲಿದ್ದು KSRTC ಬಸ್ ನಿಲ್ದಾಣದಿಂದ ಆಟೋ ಮುಖಾಂತರ ಅಥವಾ ಬಸ್ ಮುಖಾಂತರ ತಲುಪಬಹುದಾಗಿದೆ.

 ಪಾಪನಾಶ ದೇವಸ್ಥಾನ :

ದೇವಸ್ಥಾನಗಳ ನಗರಿಯಾದ ಬಿದರನಲ್ಲಿ ಪಾಪನಾಶ ದೇವಸ್ಥಾನವು ಒಂದು. ಇಲ್ಲಿನ  ಶಿವಲಿಂಗದ ದರ್ಶನ ಪಡೆಯಲು ತುಂಬಾ ಭಕ್ತಾದಿಗಳು ಬರುತ್ತಿರುತ್ತಾರೆ. ಭಕ್ತಾದಿಗಳು ಇಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜೆ ಮಾಡ ಬಹುದಾಗಿದೆ. ಇಲ್ಲಿ ಪಾಪ ವಿನಾಶಿನಿ ಎನ್ನುವ ಕೊಳ ಇರುವುದರಿಂದ ಇ ಸ್ಥಳಕ್ಕೆ ಪಾಪನಾಶ ಎನ್ನುವ ಹೆಸರಿಡಲಾಗಿದೆ ಎನ್ನುವ ಪ್ರತೀತಿ.

ಇತಿಹಾಸ : ಇಲ್ಲಿನ ಶಿವಲಿಂಗವನ್ನು ತ್ರೇತಾ ಯುಗದಲ್ಲಿ ಶ್ರೀ ರಾಮನು ಲಂಕೆಯಿಂದ ಹಿಂತಿರುಗುವಾಗ ಸ್ಥಾಪಿಸಲಾಗಿದೆ ಎನ್ನುವುದು ಇತಿಹಾಸ. ಇಲ್ಲಿನ ಪಾಪ ವಿನಾಶಿನಿ ಕೊಳಕ್ಕೆ ತುಂಬಾ ಇತಿಹಾಸವಿದೆ.ಇ ಕಲ್ಯಾಣಿಯು ಗುರು ನರಸಿಂಹ ಸರಸ್ವತಿಯವರು ಭೇಟಿಯಾದಾಗ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇ ಕೊಳದಲ್ಲಿ ಸ್ನಾನ ಮಾಡುವುದರಿಂದ ಆತ್ಮ ಶುದ್ಧಿ ಯಾಗುತ್ತದೆ ಎಂದು ನಂಬಿಕೆ.

ಮಾರ್ಗ:  ಪಾಪನಾಶ ದೇವಸ್ಥಾನವು ಬೀದರನ ಪಶ್ಚಿಮ ಭಾಗಕ್ಕೆ ನೆಲೆಸಿದ್ದು, KSRTC ಬಸ್ ನಿಲ್ದಾಣದಿಂದ ಸುಮಾರು 4km ದೂರದಲ್ಲಿದೆ. ಬಸ್ ನಿಲ್ದಾಣದ ಹೊರಗಡೆ ಸಿಗುವ ಆಟೋ ಮುಖಾಂತರ ಇಲ್ಲಿಗೆ ತಲುಪಬಹುದಾಗಿದೆ. ಅಲ್ಲದೆ ಸಿಟಿ ಬಸ್ ಗಳ ಮುಖಾಂತರ ಕೂಡ ತಲುಪಬಹುದಾಗಿದೆ.

ಇದಲ್ಲದೆ ದೇವದೇವ ವನ - ಉದ್ಯಾನವನ , ಬರಿದ ಶಾಹಿ ಉದ್ಯಾನವನ, ಮೈಲಾರ ಮಲ್ಲಣ್ಣ,  ಕಾರಂಜಾ ಆಣೆಕಟ್ಟು, ಸಿದ್ದಾರುಢ ಮಠ ಮುಂತಾದ ಪ್ರೇಕ್ಷಣಿಯ ಸ್ಥಳಗಳು ಇರುವುದುಂಟು.

ಹುಮನಾಬಾದ್ :-

ಹುಮನಾಬಾದ್ , ಬೀದರ್ ಜಿಲ್ಲೆಯ ಒಂದು ತಾಲೂಕು ಪ್ರದೇಶವಾಗಿದೆ. ಬೀದರ್ ಮತ್ತು ಗುಲ್ಬರ್ಗಾ ಮದ್ಧ್ಯೆ ಬರುವ ರಾಷ್ಟೀಯ ಹೆದ್ದಾರಿ 9 ರಲ್ಲಿ ಹುಮನಾಬಾದ್ ನೆಲೆಸಿರುತ್ತದೆ . ಗುಲ್ಬರ್ಗಾ ಇಂದ ಸುಮಾರು 62km ದೂರದಲ್ಲಿದ್ದು ಬಸ್ ಮುಖಾಂತರ ಇಲ್ಲಿಗೆ ತಲುಪಬಹುದು . ಬೀದರ್ ನಿಂದ ಸುಮಾರು 60km ಗಳ ದೂರದಲ್ಲಿದ್ದು ರೈಲು ಅಥವಾ ಬಸ್ ಮುಖಾಂತರ ತಲುಪಬಹುದಾಗಿದೆ.

ಮಾಣಿಕನಗರ :  ಮಾಣಿಕನಗರವು , ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನಲ್ಲಿರುವ ಸಣ್ಣ ಹಳ್ಳಿ. 

ಮಾಣಿಕನಗರದಲ್ಲಿ , ಮಾಣಿಕಪ್ರಭುಗಳ ದಿವ್ಯ ಸಮಾಧಿಯ ದೇವಸ್ಥಾನವಿದೆ. ಇವರು ಮಹಾನ್ ಸಂತರಾಗಿದ್ದರು. ಇವರನ್ನು ದತ್ತಾತ್ರೇಯ ಅವತಾರವೆಂದು ಕೂಡ ತಿಳಿಯಲಾಗುತ್ತದೆ . ಇವರ ದಿವ್ಯ ಸಮಾಧಿಗೆ ಭವ್ಯವಾದ ಮಂದಿರವನ್ನು ನಿರ್ಮಿಸಲಾಗಿದೆ. ವರ್ಷದಲ್ಲಿ 2 ಬಾರಿ ಜಾತ್ರೆ ನಡೆಸಲಾಗುತ್ತದೆ. ದೇಶ-ವಿದೇಶಗಳಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ . ಇಲ್ಲಿ ಸಂಸ್ಕೃತ ಶಾಲೆಯಿದ್ದು ಬ್ರಾಹ್ಮಣ ಮಕ್ಕಳಿಗೆ ಉಚಿತ ವಸತಿ ಜೊತೆಗೆ ಸಂಸ್ಕೃತ ವಿಧ್ಯಾಭ್ಯಾಸವನ್ನು ಕಲ್ಪಿಸಲಾಗುತ್ತದೆ.

ಭೇಟಿ ನೀಡಲು ಬಂದ ಪ್ರವಾಸಿಗರಿಗೆ ಉಳಿಯಲು ವಸತಿ ಗೃಹಗಳ ಸೌಲಭ್ಯವನ್ನು ದೇವಸ್ಥಾನದಿಂದಲೇ ಕಲ್ಪಿಸಲಾಗುತ್ತದೆ. ಇದು  ಪ್ರವಾಸಿಗರು ಭೇಟಿ ನೀಡಿ  ದೇವರ ಅನುಗ್ರಹ ಪಡೆಯಲು ಉತ್ತಮ ಸ್ಥಳವಾಗಿದೆ.



ವಿರಭದ್ರೆಶ್ವರ ದೇವಸ್ಥಾನ : 

ಹುಮನಾಬಾದ್ ನಗರ ದೇವರೆಂದೇ ಪ್ರಸಿದ್ಧಿಯಾಗಿದೆ ಅಲ್ಲಿನ ವಿರಭದ್ರೆಶ್ವರ ದೇವಸ್ಥಾನ. ಪ್ರತಿ ವರ್ಷವೂ ಜನೆವರಿ 26 ರಂದು ಜಾತ್ರೆ ನಡೆಸಲಾಗುತ್ತದೆ. ದೇಶದ ಮೂಲೆ -ಮೂಲೆ ಗಳಿಂದ ಜನರು ಬರುತ್ತಾರೆ . ವಿಜೃಂಭಣೆ ಯಿಂದ ದೇವರ ಉತ್ಸವ ಮೂರ್ತಿಯನ್ನು ನಗರದ ಬಿದಿ-ಬೀದಿಗಳಲ್ಲಿ ಮೆರೆಸಲಾಗುತ್ತದೆ. ಇ ದೇವಸ್ಥಾನವು 16ನೇ ಶತಮಾನದಲ್ಲಿ ಚೋಳರು ನಿರ್ಮಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ದೇವಸ್ಥಾನದ ಶಿಖರದ ಕರಕುಶಲತೆಯು ನೋಡುಗರ ಮನ ಸೆಳೆಯುತ್ತದೆ.

ಬಸವಕಲ್ಯಾಣ :-

ಬಸವಕಲ್ಯಾಣವು ಬೀದರ ಜಿಲ್ಲೆಯ ಒಂದು ತಾಲೂಕು ಅಲ್ಲದೆ ಐತಿಹಾಸಿಕ , ಪ್ರೇಕ್ಷಣಿಯ , ಧಾರ್ಮಿಕ ಕ್ಷೇತ್ರವಾಗಿದೆ. ಇದಕ್ಕೆ 12ನೆ ಶತಮಾನದಿಂದ ಇತಿಹಾಸವಿದೆ . ಇದು ಸಂತ ಶರಣರ ನಾಡು ಎಂದೇ ಪ್ರಸಿದ್ಧಿಯಾಗಿದೆ. 12ನೆ ಶತಮಾನದಲ್ಲಿ ವಚನ ಸಾಹಿತ್ಯದ ಕ್ರಾಂತಿಯನ್ನೇ ಸಾರಿದರು ವಿಶ್ವಗುರು ಬಸವಣ್ಣನವರು.

ಅನುಭವ ಮಂಟಪ, ಬಸವಣ್ಣನವರ ದೇವಸ್ಥಾನ, ಬಿಜ್ಜಳನ ಕೋಟೆ (ಕಲ್ಯಾಣದ ಚ್ಯಾಲುಕ್ಯರು), ಗವಿಗಳು ಅಲ್ಲದೆ ಮಾತೆ ಮಹಾದೇವಿ ಯವರ ಬಸವ ಮಂಟಪವು ಜಗತ್ಪ್ರಸಿದ್ಧಿಯಾಗಿದೆ. ಬಿಜ್ಜಳನ ರಾಜಧಾನಿಯಾದ ಕಲ್ಯಾಣವನ್ನು ವಿಶ್ವಗುರು ಬಸವಣ್ಣನವರ ಜಗತ್ಪ್ರಸಿದ್ಧಿಯಿಂದಾಗಿ ಬಸವಕಲ್ಯಾಣ ಎಂದು ಮಾಡಲಾಗಿದೆ.

ಮಾರ್ಗ :  ಬಸವಕಲ್ಯಾಣವು ರಾಷ್ಟೀಯ ಹೆದ್ದಾರಿ 9ರಿಂದ 5km ದೂರದಲ್ಲಿದೆ. ಹುಮನಾಬಾದ್ ನಿಂದ ಸುಮಾರು 30km ದೂರದಲ್ಲಿದ್ದು ಬಸ್ ಮತ್ತು ಜೀಪ್ ಗಳ ಮುಖಾಂತರ ತಲುಪಬಹುದಾಗಿದೆ.

ಅನುಭವ ಮಂಟಪ: 
ಇದು ಬಸವಣ್ಣನವರ ಕಾಲದಲ್ಲಿ ಸಂತ-ಶರಣರು ಸಭೆ ಸೇರುತ್ತಿದ್ದ ಸ್ಥಳ. ಇದನ್ನು ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎಂದು ಕೂಡ ಪರಿಗಣಿಸಲಾಗುತ್ತದೆ. ಶರಣರೆಲ್ಲರು ಇಲ್ಲಿಗೆ ಬಂದು ತಮ್ಮ-ತಮ್ಮ ವಿಚಾರಗಳನ್ನೂ ಚರ್ಚಿಸುತ್ತಿದ್ದರು. ಶಿವಲಿಂಗದ ಆಕರದಲ್ಲಿ ಇದನ್ನು ಕಟ್ಟಲಾಗಿದೆ. ಒಳಗೊಡೆಗಳ ಮೇಲೆ ಎಲ್ಲಾ ಶರಣರ ಚಿತ್ರಗಳನ್ನು ಬಿಡಿಸಿ ಶರಣರ ಪರಿಚಯವನ್ನು ನೀಡಲಾಗುತ್ತಿದೆ. ಪಕ್ಕದಲ್ಲಿಯೇ ಶಿವಶರಣ ಹರಳಯ್ಯನವರ ಕೆರೆ ಇದ್ದು ಪ್ರವಾಸಿಗರಿಗೆ ಭೇಟಿ ನೀಡಲು ಒಳ್ಳೆಯ ತಾಣವಾಗಿದೆ. ಬಸವಕಲ್ಯಾಣ ಪ್ರವೇಶಿಸುತ್ತಿನ್ದದಂತೆಯೇ ಎಡ ಭಾಗಕ್ಕೆ ಗಿಡಗಳ ಮಧ್ಯೆ ಶಿವಲಿಂಗವು ಕಾಣಿಸುತ್ತಿರುತ್ತದೆ.

ಬಸವ ಮಂಟಪ :

ಇದು ಮಾತೆ ಮಹಾದೆವಿಯವರು ಕಟ್ಟಿಸಿದ ಬಸವ ಮೂರ್ತಿ. ಇಲ್ಲಿ ವಿಶ್ವದಲ್ಲಿಯೇ ಅತಿ ಎತ್ತರವಾದ ಸುಮಾರು 108 ಅಡಿಗಳ ಎತ್ತರದ ಬಸವಣ್ಣನ ಮೂರ್ತಿಯನ್ನು ಸ್ಥಾಪಿಸಲಾಗಿದ್ದು, ಬಸವಕಲ್ಯಾಣದ ಪ್ರೇಕ್ಷಣಿಯ ಮತ್ತು ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ . ಬಸವಕಲ್ಯಾಣ ಪ್ರವೇಶಿಸುತ್ತಿದ್ದಂತೆಯೇ ಬಲ ಭಾಗಕ್ಕೆ ಬಯಲು ಜಾಗದಲ್ಲಿ ಬಸವ ಮೂರ್ತಿಯು ಕಾಣಿಸುತ್ತದೆ. ಸಂತ-ಶರಣರ ಮೂರ್ತಿಗಳನ್ನು ಸ್ಥಾಪಿಸುವುದರ ಜೊತೆಗೆ ಬಸವ ಮೂರ್ತಿಯ ಕೆಳಗಡೆ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದೆ . ಇದಲ್ಲದೆ ತೆಳ್ಳಿನ ಪ್ರದೇಶವನ್ನು  ಕೊರೆದು ಶರಣರ ಗವಿಗಳನ್ನು ನಿರ್ಮಿಸಲಾಗುತ್ತಿದೆ. ಬಸವ ಮೂರ್ತಿಯ ಸುತ್ತಮುತ್ತ ಸಣ್ಣ ಉದ್ಯಾನವನವನ್ನು ನಿರ್ಮಿಸಲಾಗಿದ್ದು ತಂಪಾದ ವಾತಾವರಣ ಹೊಂದಿರುತ್ತದೆ.

ಬಿಜ್ಜಳನ ಕೋಟೆ :

ಕಲ್ಯಾಣದಲ್ಲಿ ಚ್ಯಾಲುಕ್ಕ್ಯರು ಆಳ್ವಿಕೆ ಮಾಡುವಾಗ , ಕಲ್ಯಾಣವನ್ನು ಚ್ಯಾಲುಕ್ಯರ ರಾಜಧಾನಿಯನ್ನಾಗಿ ಮಾಡಿದ್ದರು. 12ನೆ ಶತಮಾನದಲ್ಲಿ ಬಿಜ್ಜಳನು ಕಳಚುರಿಯರ ಪ್ರಬಲ ರಾಜನಾಗಿದ್ದನು. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಗಳಾಗಿದ್ದರು. ಇಂದಿಗೂ ಕೋಟೆಯೊಳಗೆ ಅಳಿದುಳಿದ ಅವಶೇಷಗಳನ್ನು ಕಾಣಬಹುದಾಗಿದೆ. ಕೋಟೆಯ ಮುಂಭಾಗದಲ್ಲಿ ಸಂಗ್ರಾಲಯವಿದ್ದು ಒಂದಿಷ್ಟು ರಾಜರ ಕಾಲದ ಆಯುಧಗಳನ್ನು ಸಂಗ್ರಹಿಸಿಡಲಾಗಿದೆ.

ಬಸವಣ್ಣನವರ ದೇವಸ್ಥಾನ :

ಬಸವಕಲ್ಯಾಣದ ಮಧ್ಯ ಭಾಗದಲ್ಲಿ ಬಸವಣ್ಣನವರ ಭವ್ಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಬಸವ ಜಯಂತಿ ಯಂದು ಜಾತ್ರೆ ಮಾಡಲಾಗುತ್ತದೆ. ಭಾರಿ ಸಂಖೆಯಲ್ಲಿ ಭಕ್ತರು ಸೇರುವುದಲ್ಲದೆ ಬಸವಣ್ಣನವರ ಮೂರ್ತಿಯನ್ನು ನಗರದ ಭವ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ದೇವಸ್ಥಾನದ ಗೋಡೆಗಳ ಮೇಲೆ ಬಸವಣ್ಣನವರ ಜೀವನ ಚರಿತ್ರೆಯನ್ನು ಚಿತ್ರಿಸಲಾಗಿದೆ. ದೇವಸ್ಥಾನದಲ್ಲಿ,  ಬಸವಣ್ಣನವರ ಹೆಸರಿನಲ್ಲಿ ದಿನವು ದಾಸೋಹ ಅಂದರೆ ನಿತ್ಯ ಅನ್ನ ಸಂತರ್ಪಣೆ ಮಾಡಲಾಗುತ್ತದೆ. 

ಇದಲ್ಲದೆ ಸದಾನಂದ ಸ್ವಾಮಿಯವರ  ಮಠ, ಖಾಜಾ ಬಂದೆ ನವಾಜ್ ದರ್ಗಾ, ಬಸವ ಗ್ರಂಥಾಲಯ, ಬಂದವರ ಓಣಿ, ನಾರಾಯಣಪುರ ಮತ್ತು ಶಿವಪುರದ ದೇವಸ್ಥಾನಗಳು ಇವೆಲ್ಲವೂ ಬಸವಕಲ್ಯಾಣದ ಐತಿಹಾಸಿಕ ಮತ್ತು ಪ್ರವಾಸಿಗರ ಆಕರ್ಷಣಿಯ ಸ್ಥಳಗಳಾಗಿವೆ.

ಅಮೃತ ಕುಂಡ : ಹುಮನಾಬಾದ್ ನಿಂದ ಪುಣೆಯ ಕಡೆಗೆ ರಾಷ್ಟೀಯ ಹೆದ್ದಾರಿ 9 ರಲ್ಲಿ ಸುಮಾರು 40km ದೂರ ಕ್ರಮಿಸಿದರೆ ಎಡಗಡೆ ಅಮೃತ ಕುಂಡ ಎಂಬ ದೇವಸ್ಥಾನ ಸಿಗುತ್ತದೆ.  ಬೆಟ್ಟಗಳ ಮಧ್ಯದಲ್ಲಿ ಶ್ರೀ ರಾಮನು ನಿರ್ಮಿಸಿದ ಶಿವಲಿಂಗವಿದೆ. ಸದಾ ನಿರು ಹರಿಯುತ್ತಿರುವ 2 ಕಲ್ಯಾಣಿಗಳಿವೆ. ಇ ಕಲ್ಯಾಣಿಯಿಂದ ಹರಿಯುವ ನಿರು ಮುಲ್ಲಾಮಾರಿ ಎಂಬ ನದಿಯ ಉಗಮ ಸ್ಥಾನವಾಗಿದೆ. 

ಇತಿಹಾಸದ ಪ್ರಕಾರ ಇಲ್ಲಿನ ಶಿವಲಿಂಗವು ಶ್ರೀ ರಾಮನು ಸೀತೆಯನ್ನು ಕರೆದುಕೊಂಡು ಹಿಂತಿರುಗುವಾಗ ಸ್ಥಾಪಿಸಲಾಗಿದೆ ಎಂದು ತಿಳಿಸಲಾಗುತ್ತದೆ. ಅಲ್ಲದೆ ಇಲ್ಲಿನ ಕಲ್ಯಾಣಿಗಳಲ್ಲಿ ವಿವಿಧ ತರಹದ ಜಲಚರ ಪ್ರಾಣಿಗಳಿರುವುದು ವಿಶೇಷ. ಆಮೇ , ಮೀನುಗಳು, ಹಾವುಗಳು ಎಲ್ಲವು ಕಲ್ಯಾಣಿಯಲ್ಲಿ ಕಂಡುಬರುತ್ತವೆ. ವಿಷ್ಣುವು ಮೋಹಿನಿಯ ಅವತಾರದಲ್ಲಿ ಅಮೃತವನ್ನು ಹಿಡಿದುಕೊಂಡು ಹೋಗುತ್ತಿರುವಾಗ ಅದರ ಒಂದು ಹನಿಯು ಇಲ್ಲಿ ಬಿದ್ದು ಕಲ್ಯಾಣಿಯಾಗಿದೆ ಎಂದು ನಂಬಿಕೆ. ಹೀಗಾಗಿಯೇ ಇದನ್ನು ಅಮೃತಕುಂಡ ಎಂದು ಕರೆಯಲಾಗುತ್ತದೆ.

ಮುಂತಾದ ಪ್ರೇಕ್ಷಣಿಯ , ಐತಿಹಾಸಿಕ , ಧಾರ್ಮಿಕ ಮತ್ತು ಪಾರಂಪರಿಕ ಸ್ಥಳಗಳನ್ನು ಹೊಂದುರಿವ ಬೀದರ್ ಜಿಲ್ಲೆಯು ಒಳ್ಳೆಯ ಪ್ರವಾಸಿ ತಾಣವಾಗಿದೆ.

Friday, May 16, 2014

ನಾಡಿನಿಂದ ಕಾಡಿಗೆ -- ನಾವು ನಮ್ಮ ಪಾಡಿಗೆ !!!

ಅದೇ office , ಅದೇ ಕೇಲಸ , ಅದೇ Phone, ಅದೇ BMTC, ಲೈಫ್ ಅಲ್ಲಿ ಒಳ್ಳೇ Break ಬೇಕಿತ್ತು ಗುರು...

      ಬಿಸಿಲ ಧಗೆಗೆ ಬೇಸರಿಸಿದ ಮನ ,
                   ಮುಂಜಾನೆ-ರಾತ್ರೀ ಕಳೆದಿತ್ತು  Office ಅಲ್ಲೇ ದಿನ ,
                               E Gap ಅಲ್ಲೇ Fix ಆಯಿತು  ಒಂದೊಳ್ಳೆ   ವನ ,
                                            ಅದ್ಭುತ , ಅವಿಸ್ಮರಣೀಯ , ಆ 4 ದಿನದ ಜೀವನ  !!

ಪ್ರತಿ ವರುಷದಂತೆ ಇ ವರುಷ ಕೂಡ ದಾವಣಗೆರೆ ಇಂದ ನನ್ನ ಸ್ನೇಹಿತರು ಉಳವಿ ಕಾಡಿಗೆ (ದಾಂಡೇಲಿ - ಅಣಶಿ  ಹುಲಿ ಸಂರಕ್ಷಣ ಪ್ರದೇಶ) ಚಾರಣಕ್ಕಾಗಿ ಹೋಗುತ್ತಿರುವುದು ತೀಳಿದು Call ಮಾಡೀ ಒಂದು Seat Book ಮಾಡ್ಕೊಂಡೇ . 

May 1 - 5... , 4 ದಿನಗಳ ಚಾರಣ ಸ್ವಲ್ಪ ಜಾಸ್ತಿ ಸಮಯ ಅಂತ ಅನಿಸ್ತು ಪ್ರಾರಂಭದಲ್ಲಿ ಆದ್ರೆ ಅಲ್ಲಿನ ನಿಸರ್ಗ, ಪ್ರಕೃತಿಯ ಸೊಬಗು ನೋಡಲು ಇ 2 ಕಣ್ಣು ಸಾಕಾಗಲ್ಲ ಅಂತ ಹೇಳಿದ್ರೆ ತಪ್ಪಾಗಲಾರದು .. 

Here begins the Journey  :-

Wild India is an adventure club in Davanagere, which conducts every year an adventure trip for the kids between 8-14 years old, since 12 years. Organisers are my friends and they have been calling me since years, but i never got chance to go there due to non-technical issues ;) :D and i feel myself lucky to join them this year...

Here begins the Introduction,  

ಅನಿಲ್  ಭಾರಂಗಳ್ :  Organiser , ಒಂಥರಾ Team  ಅಲ್ಲಿ PM  ಇದ್ಧಂಗೆ .. ಎಲ್ಲಾ Arrangements, Plan , Settlements ಇವರೇ ನೋಡ್ಕೊಳ್ತಾ ಇದ್ದಿದ್ದು .. 

ಪ್ರಹ್ಲಾದ್ ಭಟ್  : "ಸಕಲ ಕಲಾ ವಲ್ಲಭರು", Team Leader .. ಸಂಗೀತದಲ್ಲಿ ವಿದ್ವಾನ ... Creativity ಲಿ ಪೈಲ್ವಾನ್ .. :) Trip ಗೆ ಬಂದಿರೋ ಮಕ್ಕಳಿಗೆಲ್ಲ ಅಚ್ಚು-ಮೆಚ್ಚು .. Team ಯಾವಾಗಲು ನಗುತಾ, ಖುಷಿಯಿಂದ ಇರಬೇಕು ಅಂತಾ ಏನಾದ್ರು ಒಂದು ಹೇಳೋದು, ನಗಿಸುವುದು ಇವರ  ಕಸುಬು ...!

ಚೇತನ್ ಸರ್ :  Defence Minister :) Team ಅಲ್ಲಿರೋ ಮಕ್ಕಳಿಗೆಲ್ಲ ಸ್ಥಳದ Information ಆಗ್ಲಿ, Moral Support ಇವರದೇ duty .. ಗಬ್ಬರ್ ಸಿಂಗ್ ಸರ್ ಅಂದ್ರು ಬೇಜಾರಿಲ್ಲ ! :)

ವಿನಾಯಕ ಪಾಟೀಲ್ : ನಮ್ಮ ಹುಡುಗಾನಪ,  ಭಯಂಕರ Strict Instructor .. ನಾವು ಇವರ Under ಅಲ್ಲೇ Trekking ಮುಗ್ಸಿರೋದು ;) 

The above 4 people were like 4 emblem for the trekking camp...

Now meet the 3 Roses of the trip ;) ;) 

ಕೃತಿಕಾ : Professionally doctor, Basically friend and Instructor in the Trip .. :P  Trip ಅಲ್ಲಿ ಏನಾದ್ರು ಆದ್ರೆ , First Aid ಮಾಡಿ Medicine ಕೊಡೋದು ಇವರ ಕೆಲಸ .. 

ಮೇಘನಾ & ಪೂಜಾ : Treasurers in the Team .. Seniors to me somewhat ;) ;) :P.. These two madams used to take care of everyone's mobiles and amount handed over by kids which were not allowed to keep with them in the trip.

Now meet the 2 states of the trip:

ನಟರಾಜ್  : Professional Photographer ,  ಕಾಡಲ್ಲಿ ನಡೆದು ಸುಸ್ತಾದವರಿಗೆಲ್ಲ Smile Please ಅನ್ನೋ ಜವಾಬ್ದಾರಿ .. 
ಪ್ರಭು ಸರ್ : ನೋಡಕ್ಕೆ ಭಯಂಕರ ಸೈಲೆಂಟ್ , ಆದ್ರೆ  ಹೊಡಿಯೋ ಡೈಲಾಗ್ ಮಾತ್ರ ನೆನಿಸ್ಕೊಲ್ಲೋ ಹಂಗಿರ್ತಿತ್ತು  :)

Black Cats :

ಗಂಗಾಧರ : Professional Adventurist , Trip Guide and His team has done fantastic job in performing all the activities.

Finally:

27 students, who were the main part of this trip.. Such an awesome kids who made the trip really wonderful and unforgettable..

ಉಳವಿ-14 ರ ಚಾರಣಕ್ಕೆ  ಇದು ನಮ್ಮ complete Family .. .. .. .. .. .. .. :)

Following were the rules in the trekking :-

1. Do not throw the plastics anywhere in the forest.
2. Do not carry mobiles and If any, has to handover to Meghan or Pooja.
3. Instructors rules are final ..

Day - 1 :

May1 ಬೆಳಿಗ್ಗೆ 8:30 ಕ್ಕೆ ಎಲ್ಲರು ದಾವಣಗೆರೆ Railway Station ಅಲ್ಲಿ ಸೇರಿದೆವು .   Indian Train on Time ಬಂದ್ರೆ ಅದು ನಮಗಾಗುವ ಅವಮಾನ .. 8:30 ಕ್ಕೆ ಹೊರಡಬೇಕಾದ ನಾವು Train ಹತ್ತಿ ಹೊರಟಿದ್ದು 9:30 ಕ್ಕೆ .. Wild India ವತಿಯಿಂದ ಎಲ್ಲರು T-Shirt ಪಡೆದು, ಧರಿಸಿ, ಒಂದೊಳ್ಳೆ Pose ಗೆ Smile ಮಾಡಿದೆವು... 



ಮಧ್ಹ್ಯಾನ 1:30 ರ ಸಮಯ .. ಹುಬ್ಬಳ್ಳಿ ಇಂದ Maxi Cab ಹತ್ತಿ ಉಳವಿ ಕಡೆಗೆ ಹೊರಟೆವು .. ಕೊನೆಯ ಘಳಿಗೆಯಲ್ಲಿ ಸೇರ್ಪಡೆಯಾದರಿಂದ ಜನ ಜಾಸ್ತಿ , Seat ಕಮ್ಮಿ ಆಗಿದ್ದು ಅಚ್ಚರಿ ಏನು ಮೂಡಿಸಲಿಲ್ಲ..  ಹುಬ್ಬಳ್ಳಿ ಊರ ಹೊರಗಡೆ ಇರುವ ಒಳ್ಳೆ ಹೋಟೆಲ್ ಅಲ್ಲಿ ಊಟ ಮುಗಿಸಿ Cab ಹತ್ತಿ ಮತ್ತೆ Journey Continue ಮಾಡಿದೆವು ...  

ನಾವು Trip ಹೊರಟಿರುವುದು ದೇವರಿಗೆ ಹೆಂಗೆ ಗೊತ್ತಾಯ್ತು ಗೊತ್ತಾಗ್ಲಿಲ್ಲಪ್ಪಾ   .. ಊಟ ಮಾಡಿ Cab ಅಲ್ಲಿ ಕೂತಿದ್ದೆ ತಡ ವರುಣನ ಅರ್ಭಟ!! ಮೈ, ಮನಸ್ಸು ಎಲ್ಲಾ ತಂಪು ಮಾಡಿ ಬಿಟ್ಟಿತು ... ತುತಿರೋ Cab ಅಲ್ಲಿ , ಮಳೆಗೆ ನೆಂದಿರೋ ತಲೆಗಳೇ ಜಾಸ್ತಿ .. ಆದರೆ Adventure Trip , ಎಲ್ಲಾನು Enjoy ಮಾಡ್ಬೇಕು , Basic Thumb Rule  :)

ತಂಪು ತಂಗಾಳಿಯ ಸವಿಯುತ್ತ , ರಾತ್ರಿ 7:30ಕ್ಕೆ   ಉಳವಿಯಲ್ಲಿರುವ ಮುರುಗ ಮಠದಲ್ಲಿ ನೆಲೆಯುರಿದೆವು ..  Luggage Drop ಮಾಡಿ, ಫ್ರೆಶ್ Up ಆಗಿ , ಎಲ್ಲರು ಚನ್ನಬಸವೆಶ್ವರನ ಸನ್ನಿಧಿಗೆ ತೆರಳಿ , ದರ್ಶನ ಪಡೆದು ದಾಸೋಹದ ಸಾಲಿನಲ್ಲಿ ನಿಂತು ಭೋಜನ ಸವೆದು ಮಠಕ್ಕೆ ವಾಪಸ್ ಬಂದೆವು .. 

Day - 2 :

ಬೆಳಿಗ್ಗೆ 6:30 ರ ಸಮಯ , ಎಲ್ಲರು ಎದ್ದು Warm Up Activities ಗೆ ಹೊರಟೆವು ... ಅಧ್ಬುತ ಏನಂದ್ರೆ Warm Up Activities ಹಾಡಿಗೆ ಕುಣಿಯುವುದು ... ಪ್ರಹ್ಲಾದ್ ಸರ್ ನೇತ್ರತ್ವದಲ್ಲಿ !!, ಅವರು ಹಾಡೀ ಮಕ್ಕಳಿಗೆ ಗೊತ್ತಾಗದ ರೀತಿಯಲ್ಲಿ Warm Up ಮಾಡ್ಸಿದ ರೀತಿ ನಿಜಕ್ಕೂ ಶ್ಲಾಘನೀಯ .. Warm Up ಕೊನೆಗೆ Waves game ಫೂಲ್ ಖುಷಿ ಕೊಟ್ಟಿತು ಅಂದ್ರೆ ಸುಳ್ಳಾಗಲ್ಲ .. 


Warm Up ಇಂದ ಬಂದ ಮೇಲೆ ಎಲ್ಲರು ಬ್ಯಾಗ್ ready ಮಾಡ್ಕೊಂಡು ಚಾರಣಕ್ಕೆ ಸಜ್ಜಾದೆವು ... ಮಧ್ಯಾನದ ಊಟ, Wild India ಇಂದ Provide ಮಾಡಿರೋ Water Bottle Fill ಮಾಡಿ ಎಲ್ಲರು ಕಾಡಿನತ್ತ ಪಯಣ ಶುರು ಮಾಡಿದೆವು.. 

ಸಿದಾ ಹೊರಟಿದ್ದೆ ಆಕಳ ಗವಿಗೇ .. ಆದರೆ ದಾರೀಯಲ್ಲಿ Rappelling Activity ಮಾಡ್ಸಕ್ಕೆ ಗಂಗಾಧರ್ & Team ಎಲ್ಲಾ ವ್ಯವಸ್ಥೆ ಮಾಡಿದ್ದರು .. ವಿನಾಯಕ ಪಾಟೀಲ್, ಎಲ್ಲರಿಗು ಒಂದು Round Rappelling ಮಾಡಿಸಿ ಎಲ್ಲರನ್ನು ಆಕಳ ಗವಿಗೇ ಕರೆದೊಯ್ದರು .. 

 


















ಶರಣರ ನಾಡು, ನುಡಿಯ ಪರಿಚಯ ನೀಡಿ ಚೈತನ್ಯ ಸರ್ ವಿದ್ಯಾರ್ಥಿಗಳಿಗೆ ಅಲ್ಲಿನ ಗುಹೆಗಳ ವೀಕ್ಷಣೆ ಮಾಡಿಸಿದರು .. 
ಅಲ್ಲಿಂದ ಸಿದ ಹೊರಟಿದ್ದೆ ಶಿವಪುರಕ್ಕೆ .. ಅಲ್ಲಿನ ಒಂದು ಅಶ್ರಮದಲ್ಲಿತ್ತು ನಮ್ಮ ನಿವಾಸ .. ದಾರಿಯಲ್ಲಿ ಸಿಗುವ ಸಣ್ಣ ಹೊಳೆಯಲ್ಲಿ ಆಟ ಆಡಿ, ಸ್ನಾನ ಮುಗಿಸಿ ಅಶ್ರಮದತ್ತ ಪಯಣ ಸಾಗಿಸಿದೆವು .. 

ಸಂಜೆ 6:00 ಗಂಟೆ ಆಶ್ರಮ ತಲುಪಿ , ಸ್ವಚ್ಚವಾಗಿ ಆಶ್ರಮದ ಅಂಗಳದಲ್ಲಿ ಸೇರಿದೆವು .. ತುಂಬಾ ಮಳೆಯಾಗಿರುವುದರ  ಪರಿಣಾಮವಾಗಿ ಕಾಡಿನಲ್ಲಿ ಗಾಳಿಗೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಇಲ್ಲದಂತಾಗಿತ್ತು .. ಕಿಲೋ ಮೀಟರ್ಗೊಂದು ಮನೆಗಳು , ಕತ್ತಲ ಕಾಡು , ದೀಪದ ಬೆಳಕಿನಲ್ಲಿ ಸಣ್ಣ ಸಭೆ ನಡೆಸಿ ಎಲ್ಲರು ಗ್ರೂಪ್ Song ಹಾಡಿದೇವು.. ತಯಾರಾದ, ಬಿಸಿಬಿಸಿ ಊಟ ಮುಗಿಸಿ ನಿದ್ದೆ ಮಾಡಲು ಹೋದೆವು .. 
 
 Day - 3 :

ಬೆಳಿಗ್ಗೆ ಎದ್ದು ದೈನಂದಿನಿ ಕಾರ್ಯಗಳನ್ನು ಮುಗಿಸಿ Warm Up Activities ರೂಪದಲ್ಲಿ ಮತ್ತೆರಡು ಹಾಡುಗಳಿಗೆ ಹೇಜ್ಜೆ ಹಾಕಿದೇವು.. ನಂತರ ಅಲ್ಲೇ ಇರುವ ಸಭಾಂಗಣದಲ್ಲಿ Group ಫೋಟೋ ಗೆ pose ನೀಡಿ ಸಿದಾ ಕಾಡು ದಾರಿಯಲ್ಲಿ ಮಹಾಮನಿ ಗವಿಗೆ ಹೊರಟೆವು .. 


ಜರಿ ಹರಿಯುವ ದಾರಿಯಲ್ಲಿ, ಬೆಟ್ಟ ಗುಡ್ಡಗಳ ಏರುತ್ತ , ಇಳಿಯುತ್ತ , ತಂತಿ ಹಿಡಿದು ಮಹಾಮನಿ ಗವಿ ತಲುಪಿದೆವು .. ಪ್ರಶಾಂತವಾದ ಸ್ಥಳ , ಸ್ವಚ್ಛ ಪ್ರದೇಶ , ಬೆಟ್ಟದಲ್ಲಿ ಹರಿಯುವ ನಿರಿನಿಂದಾದ ಸಣ್ಣ ಜಲಪಾತ .. ಕುಡಿಯಲು ಅತಿ ತಿಳಿಯಾದ ಹರಿಯುವ ನೀರು .. ಆಶ್ರಮದಿಂದ ತಂದ ಪುಲಾವ್ ಪ್ಯಾಕೆಟ್ ಅನ್ನು ಬಿಚ್ಚಿ ತಿಂದು ಸುಮಾರು 2 ಗಂಟೆಗಳ ಕಾಲ ನೀರಿನಲ್ಲಿ ಆಡಿದೆವು ... 

 

ಅಲ್ಲಿಂದ ಮತ್ತೆ ವಾಪಸ್ಸು ಹೊರಡುವಾಗ ಸಮಯ 3 ಗಂಟೆ .. ನಿಧಾನವಾಗಿ ಬೆಟ್ಟದ ಮೇಲೆ ಚಲಿಸುತ್ತ ದಾರಿಯಲ್ಲಿ ಸಿಗುವ ಭಟ್ಟರ ಮನೆಗೆ ಬಂದೆವು .. ಭಟ್ಟರ ಮನೆಯ ವಿಶೇಷವೆಂದರೆ , ಮಹಾಮನಿ ಗವಿಗೆ ಹೊಗಿಬರುವವರಿಗೆಲ್ಲರಿಗೂ ಮಜ್ಜಿಗೆ (Butter Milk) ಕುಡಿಯಲು ಕೊಟ್ಟು ಹೊಟ್ಟೆ ತಂಪು ಮಾಡುವುದು ಮಾರಾಯರೇ .. ಹಂಗಾಗಿ ನಾವೆಲ್ಲಾ Butter Milk ಭಟ್ಟರು ಅಂತಾನೆ ಕರಿತಿದ್ವಿ ... 

ಅಲ್ಲಿಂದ ವಿಶ್ರಾಮ ಮುಗಿಸಿ ಶಿವಪುರಕ್ಕೆ ವಾಪಸ್ಸು ಬಂದೆವು .. ಬಂದನಂತರ Rope Walk Activity ಮಾಡಿ Juice ಕುಡಿದು ರಾತ್ರಿ ಊಟಕ್ಕೆ ತಯಾರಾದೆವು .. ಆಶ್ರಮದಲ್ಲಿ ತಯಾರಾದ ಬಿಸಿಬಿಸಿ ಊಟವನ್ನು ಮುಗಿಸಿ Fire Camp organise ಮಾಡಿದೆವು .. 

ಎಲ್ಲರು ತಮ್ಮಲ್ಲಿರುವ ಪ್ರತಿಭೆಯನ್ನು ಎಲ್ಲರಿಗು ತೋರಿಸುವ ಸಮಯ .. ಕತ್ತಲ ರಾತ್ರಿಯ ಕಾಡಲ್ಲಿ , ಬೆಂಕಿ ಇಟ್ಟು ಮಧ್ಯದಲ್ಲಿ, ಸುತ್ತ ಕುಳಿತು, ಹಾಡುಗಳು, ನಗೆಹನಿಗಳು , ನೃತ್ಯಗಳು , ಮೂಕಾಭಿನಯ, ಮುಂತಾದ ವಿಭಿನ್ನವಾದ ಪ್ರತಿಭೆಗಳನ್ನು ಎಲ್ಲರು ಪ್ರದರ್ಶಿಸಿದರು ... ತಮ್ಮ ದಿನಚರಿಯನ್ನು ಬರೆದು ಎಲ್ಲ ವಿದ್ಯಾರ್ಥಿಗಳು ಮಲಗಿದರು .. 

Day - 3:

ಬೆಳಿಗ್ಗೆಯ ತಿಂಡಿ ತಿಂದು , ಮಧ್ಯಾನದ ಊಟವನ್ನು ಪಾರ್ಸೆಲ್ ತೆಗೆದುಕೊಂಡು ಆಶ್ರಮದಿಂದ ಹೊರಟೆವು .. ಭಾರವಾದ ಬ್ಯಾಗ್ ಗಳನ್ನೂ ಬೆನ್ನಿಗೆ ಹಾಕಿಕೊಂಡು ಬೆಟ್ಟ ಹತ್ತಲು ಶುರು ಮಾಡಿದೆವು.. ಎತ್ತರವಾದ ಬೆಟ್ಟ ಹತ್ತಿ ಇಳಿದಾಗ ಸಿಕ್ಕಿದ್ದೇ ಪಂಚಲಿಂಗ್ ದೇವಸ್ಥಾನ .. ದರ್ಶನ ಮುಗಿಸಿ ಮೇಲೆ ಬಂದು ಅಲ್ಲಿಯೇ ಇದ್ದ ದೊಡ್ಡ ಬಂಡೆಗೆ ಹಗ್ಗ ಹಾಕಿ Rock Climbing ಮಾಡಿದೆವು .. 





 ಅಲ್ಲಿಂದ ಹೊರಟು  ಸಾಯಂಕಾಲದ ಹೊತ್ತಿಗೆ ಹರಳಯ್ಯನ ಚಿಲುಮೆ ತಲುಪಿದೆವು .. ತಣ್ಣನೆಯ ಸ್ನಾನ ಮುಗಿಸಿ ಬ್ರೆಡ್ ಜಾಮ್ ತಿಂದು ಸಿದ ಉಳವಿಯ ಕಡೆಗೆ ಹೊರಟು ಮಠ ತಲುಪಿದೆವು .. Fresh Up ಆಗಿ ಎಲ್ಲರು Shopping ತೆರಳಿದೆವು .. ಉಳವಿಯ ಚುರಮುರಿ -ಮಂಡಕ್ಕಿ taste ತುಂಬಾನೇ ಚೆನ್ನಾಗಿತ್ತು ... visit ಅಂತಾ ಮಾಡಿದ್ರೆ ತಿಂದು ಬರೋದನ್ನ ಮರಿಬೇಡಿ .. 

ರಾತ್ರಿ ಎಲ್ಲರನ್ನು ಸಭೆ ಸೇರಿಸಿ , ವಿಧ್ಯಾರ್ಥಿಗಳಿಂದ ಸಲಹೆಗಳನ್ನು ಮತ್ತು Trip ಬಗ್ಗೆ ಅವರ ಅನುಭವವನ್ನು ಪಡೆದೆವು .. ಎಲ್ಲರಿಗು Wild India ಕಡೆ ಇಂದ Certificate distribute ಮಾಡಿ,  ಊಟ ಮಾಡಿ, Treasure Hunt Game ಅಡಿಸಿದೆವು .. 3 ದಿವಸ ಕಾಡಲ್ಲಿ 35kmಗಿಂತ ಜಾಸ್ತಿ ನಡೆದರೂ ಸುಸ್ತಾಗದ ವಿದ್ಯಾರ್ಥಿಗಳು ಆಟದಲ್ಲಿ ತುಂಬಾನೇ ಉತ್ಸಾಹದಿಂದ ಪಾಲ್ಗೊಂಡಿರುವುದನ್ನು ನೋಡಿ ತುಂಬಾನೇ ಖುಷಿಯಾಯಿತು ... 

Wild India 4 ದಿನದಲ್ಲಿ ಏನೇನೆಲ್ಲ ಇ ಬದುಕಿಗೆ ಕಲಿಸಿತು ಅಂತ ಯೋಚನೆ ಮಾಡ್ತಾ ಮಾಡ್ತಾ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ .. ಅಪ್ಪ-ಅಮ್ಮ ನ ಬಿಟ್ಟು ಬಂದ  ಚಿಕ್ಕ ಚಿಕ್ಕ ಮಕ್ಕಳು , ಒಂದೊಂದು ಸಲ ಅಮ್ಮನ  ನೆನಪಾಯಿತು, ಅಜ್ಜಿ ನೆನಪಾಯಿತು ಅಂತ ಅಳುತ್ತಿರಬೇಕಾದರೆ ನಮ್ಮ ಕಣ್ಣಂಚಲ್ಲಿ ನೀರು ಬಂದಿರುವುದು ಮಾಮೂಲಿ .. BSNL network ಸಿಗೊಕ್ಕೆ ಅಲ್ಲಿ ಇಲ್ಲಿ ಅಲಿದು ಮನೆಗೇ ಫೋನ್ ಮಾಡಿದ್ದೂ ಉಂಟು ..

Day 5: 

ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ತಿಂಡಿ ತಿಂದು ಕ್ಯಾಬ್ ಹತ್ತಿ ಹುಬ್ಬಳ್ಳಿಗೆ ಹೊರಟೆವು .. 




ಉಳವಿಯಿಂದ ಹೊರಟಾಗ ಫೋಟೋ ಗೆ ಕೊಟ್ಟ Smile  :)



ಮತ್ತದೇ ಹಳೆ ಬದುಕಿನತ್ತ ಪಯಣ, 
                       ಹೊತ್ತು ಮಧುರ ನೆನಪುಗಳ ದಿಬ್ಬಣ, 
                                         Wild India ಇದಕ್ಕೆಲ್ಲಾ ನೀನೆ ಕಾರಣ  :)

ಕರೆದವರಿಗೂ , ಜೋತೆಯಲ್ಲಿದ್ದವರಿಗೂ , ನಗಿಸಿ-ನಕ್ಕ ಗೆಳೆಯರಿಗೂ ನಾನೆಂದಿಗು  ಚಿರರುಣಿ.... !!

ನಟರಾಜ ಅವರು Photography ಬಗ್ಗೆ ಕೊಟ್ಟ Tips , ಚಿಕ್ಕ ಮಕ್ಕಳ ಉತ್ಸಾಹ , ಸಾಹಸತನ , ಪ್ರಭು ಅವರ ಮಾತುಗಳು , ಪ್ರಹ್ಲಾದ್ ಸರ್ ಅವರ ಹಾಡುಗಳು , ಅನಿಲ್ ಸರ್ ಅವರ ಮುಂದಾಳತ್ವ, ಚೇತನ್ ಸರ್ ಅವರ simplicity , ವಿನಾಯಕ್ ಪಾಟೀಲ್ ರ ಮಾರ್ಗದರ್ಶನ, ಡಾಕ್ಟರ ಮೇಡಂ ರ ಹೊಂದಾಣಿಕೆ, ಇನ್ನುಳಿದ ಸ್ನೇಹಿತರ ಸಹಭಾಗಿತ್ವ ಎಂದೆಂದಿಗೂ  ಮರೆಯಲಾಗದ ಅನುಭವ.... 

ಜೀವನದಲ್ಲಿ ಎಸ್ಟೇ ಎತ್ತರಕ್ಕೆ ಬೆಳೆದರು, ಎಂಥ ಸಾಧನೆ ಮಾಡಿದರು, ಎಂದೆಂದಿಗೂ ಮಕ್ಕಳಾಗಿಯೇ, ಮಕ್ಕಳಂತೆಯೇ ಉಳಿದು, ಬೆಳೆದು ಇರುವುದನ್ನು ಕಲಿತೆ ... 

ಏಕೆಂದರೆ ಮಕ್ಕಳಿಗೆ ಆಯಸ್ಸು ಜಾಸ್ತಿ , ಇನ್ನು ಚಿಕ್ಕ Age ನಂದು ಸ್ವಲ್ಪ ಆಸೆ ನು ಜಾಸ್ತಿ ... :) :) 
 


                        ಮತ್ತೆ ಭೇಟಿ ಆಗುವ ... ಸ್ಮೈಲ್ ಕೋಡಿ ಮಾರಾಯ್ರೆ ... :) :)