Monday, August 30, 2010

ನೀನೇಕೆ ಮರೆತು ಹೋದೆ ...!!!

ಕಣ್ಣಿದ್ದು ಕುರುಡನಾದೆ....
ಮಾತಿದ್ದು ಮೌನಿಯಾದೆ ...,
ಕಣ್ಣಿರನು ನಿಲ್ಲಿಸದಾದೆ.....,
ಕಾರಣ ಇಷ್ಟೇ---->> ನೀನೇಕೆ ಮರೆತು ಹೋದೆ...??



ಕುಶಲವ, ಕ್ಷೆಮವ ತಿಳಿಯದೆ ಹೋದೆ ...?
ಬಂದರು ಎದುರಿಗೆ ಗುರುತಿಸದಾದೆ ...?
ನಿನಗಾಗಿ ತಂದೆ ಪ್ರೀತಿಯ ಹೂವು ...!!!
ನೋಡದೆ ಹೇಳಿದೆ ನೀನೆ ನೋವು .... :(

ಕಾಯುವ ಮನಸಿಗೆ ಕಾರಣ ನೀನು ..
ಪ್ರೀತಿಯ ಹೂವಿಗೆ ಬಿಸಿ ನೀರು ...
ನನ್ನೀ ಹ್ರದಯದ ಮಿಡಿತವೆ ನೀನು
ಉಸಿರಲು ನಿನ್ನ ಹೆಸರಿದೆ ನೋಡು ...
ಹೇಳದೆ ಹೋಗಲು ಕಾರಣ ಏನು ..?
ನೀನು ನೋಡದೆ ಹ್ರದಯದ ನೋವು ...???

ನಿನ್ನನು ಮರೆಯಲು ಆಗದ ನಾನು
ನಿನ್ನಯ ನೆನಪಲು ಬೇಯುತ ನೋವು ..
ಬದುಕಿರುವುದು ಬರಿ ಮೂರೇ ದಿನ ..
ಕೊನೆ ಉಸಿರಲು ಕಾಯುವೆನು ನಿನ್ನ ....!!!!

----->>>ಇಂತಿ ನಿನ್ನ ಪ್ರೀತಿಯ [ಸೂರಿ ಅಲ್ಲ ;)]