Wednesday, October 6, 2010

ಮಾತಾಡು ಮೌನ ಮಾತಾಡು ...!!!!



ನೀಜ ಮಾತೊಂದು ಮೌನ ಮಾಡಿದೆ, ಈ ಜೀವಕೆ ಮುಳ್ಳಾಗಿದೆ,
ದಿನ ನೆನಪುಗಳ ಪಾಲಾಗಿದೆ, ಈ ಮನಸಿಗೆ ಗಾಯವಾಗಿದೆ,
ಸುಡು ಬಿಸಿಲಾದೆ ನೀ , ಬಿಸಿ ನೀರಾದೆ ನೀ ,ಈ ಬಡ ಜೀವಕೆ ನೋವಾದೆ ನೀ .......!!!

ಬಿರುಗಾಳಿe ಅಲೆಯೊಂದು ಮರುಭೂಮಿ ಮಣ್ಣಿಂದ ಹಸಿರಾದ ಮನ ಸೇರಿತೆ ,

ಈ ಮನವು ರಭಸಕ್ಕೆ , ಚೂರಾಗಿ ಹರಿದಾಡಿ ಇ ಮಣ್ಣ ಪಾಲಾಯಿತೇ,
ಆ ಮೀನುಗೋ ತಾರೆ ಇಂದು ಮೋಡದಲ್ಲಿ ಸಿಲುಕಾಡಿ ಕತ್ತಲಿನ ಪಾಲಾಗಿದೆ,
ಈ ಹೃದಯಕೆ ಮೌನವೆಂಬ, ಮೋಡವೊಂದು ಆವರಿಸಿ ಹನಿಯಾಗಿ ನದಿ ಸೇರಿದೆ ...!!!


ಹುಣ್ಣಿಮೆಯ ಚಂದಿರನ ಸೊಬಗನ್ನು ನೋಡಿರಲು, ನಿನ್ನ ನೆನಪೇ ನನ್ನ ಕಾಡಿದೆ,
ಆ ಚಂದ್ರನ ಸೌಂದರ್ಯದ ಸವಿಯಲ್ಲೂ ನಿನ್ನ ನೆನಪು, ಇ ಜೀವಕೆ ಬೆಳಕಾಗಿದೆ,
ಮುಂಗಾರಿನ ಮಳೆಯಲ್ಲೀ, ಸಾಗರದ ಅಲೆಯಲ್ಲಿ, ಮನಸಿಗ ತೇಲಾಡಿದೆ,
ನಿನ್ನನ್ನೇ ಹುಡುಕುತ್ತ, ನೋವನ್ನು ಸವಿಯುತ್ತ, ನಿರಲ್ಲೇ ಮುಳುಗಿಹೋಗಿದೆ .......!!!


ಅರಳುವುದು ಮರೆಯುತ್ತ, ಆಸೆಯಲ್ಲಿ ಕಮರುತ್ತ, ಇ ಹೂವು ಮುದುಡೀ ಹೋಯಿತೇ,
ಕೆಲಸಕ್ಕೆ ಬರದಹಾಗೆ ಕಾಲ್ಕಸವು ನಾ ನಾಗಿ ಇ ಭೂಮಿಗೆ ಭಾರವಾದೇನೆ,
ನಿನ್ನ ಜಗತ್ತು ವಿಸ್ಮಯದ ಗತ್ತು , ಅರಿವಿಲ್ಲದವನಂತೆ ನೋವನ್ನು ಹೊತ್ತು,
ಬದುಕಲ್ಲಿ ಹೋರಾಟ, ಏನೇನೋ ಸಿದ್ಧಾಂತ, ಹೀಗೆ ಇ ಪ್ರಪಂಚ ಪ್ರೀತಿಯ ಸುತ್ತು .....!!!!
ಮಾತಾಡು ಮೌನ ಮಾತಾಡು
...!!!!

1 comment:

Unknown said...
This comment has been removed by a blog administrator.