ಯಾರು ನೀನು ಚೆಲುವೆ
ದಿನ ದಾರಿಯಲ್ಲಿ ಸಿಗುವೆ
ನಿನ್ನ ಬರುವೆಗೆ, ನಾ ಕಾಯುತ, ಕಾಲವನ್ನು ಕಳೆವೆ ...!!!!
ಎದುರಲ್ಲಿ ನೀನು ಬರಲು
ಮನದಲ್ಲಿ ಹರ್ಷ ತರಲು
ಸಂತಸವ ಉಕ್ಕಿ ಹರಿದು
ನೀ ತಿರುಗಿ ನನ್ನ ನೋಡಲು .....!!!!
ಹೆಸರೇನು ಎಂದು ಕೇಳಲು
ಕಣ್ಣಲ್ಲೇ ನೀನು ಹೇಳಲು
ನಿನ್ನ ಮುದ್ದು ಮುಖದ ಆ ನಗು
ನನ್ನ ಹೃದಯ ನಾಟಿತೇ ಅದು ...!!!!
ದಿನರಾತ್ರಿ ನಿನ್ನ ನೆನಪು
ಕನಸಲ್ಲೂ ನಿನ್ನ ಹೊಳಪು
ಬಿಸಲೂ ಗಾಳಿ ತಂಪು
ಉಸಿರಲ್ಲೂ ನಿನ್ನ ಕಂಪು ....!!!!
ನಿನ್ನ ನಡಿಗೆಯ ಸೊಬಗು
ಬಣ್ಣಿಸಲು ಆಗದ ಸವಿಯು
ನೀನು ಬಂದು ಹೋಗುವ ಕ್ಷಣವೂ
ಮನದಲ್ಲಿ ಮೋಡದ ಮಳೆಯೂ ...!!!
ಹೇಗೆ ಬಣ್ಣಿಸಲಿ ಎಲ್ಲಾ
ಬರಿ ಸಾಲಲ್ಲೇ ಕಂಡೆ ನಾ ನಿನ್ನ
ಈ ಮಧುರ ಕಲ್ಪನೆ ಗೆ ನನ್ನ
ಇದೋ ಪ್ರೀತಿಯ ಕವನ ...!!!!
No comments:
Post a Comment