Friday, May 27, 2011

ಮದ್ಧ್ಯ ರಾತ್ರಿಲಿ -- HIGHWAY ರಸ್ತೇಲಿ


  
ಸಮಯ ಸರಿಯಾಗಿ ಮಧ್ಯಾನ 2:10. ಮಂತ್ರಾಲಯದಲ್ಲಿ ಮದುವೆಯ ಮುಗಿಸಿ,  ಎಲ್ಲರಿಗೆ  ಮಾತನಾಡಿಸಿ  ಬೇಗನೆ  ಮದುವೇ  ಮಂಟಪದಿಂದ ಹೊರಗಡೆ  ಬಂದು  ಬಸ್  ಹತ್ತಿ   ರೈಲ್ವೆ  ಸ್ಟೇಷನ್ ಗೆ  ಬಂದೆ . ವಿಚಾರಿಸಿದಾಗ  ತಿಳಿದದ್ದೇನು ಅಂದರೆ  ಬೆಂಗಳೂರಿಗೆ  ಸಾಯಂಕಾಲ  7 ಗಂಟೆಗೆ  ಟ್ರೈನ್ .  ನನಗೆ  ನುಂಗಲಾರದ ತುಪ್ಪ .. ಮಂತ್ರಾಲಯದಿಂದಲೇ   direct ಬಸ್ಗಳು  ಬೆಂಗಳೂರಿಗೆ  ತುಂಬಾ  ಇದ್ದವು  ಆದರು  ಟ್ರೈನ್  journey ಮಾಡೋಣ  ಎಂದು  ಬಂದರೆ  train ಇಲ್ಲ .. ಮತ್ತೆ  ವಿಚಾರಿಸಿದೆ , ಕೊನೆಗೆ  train ಇದ್ದಿದ್ದು  ರಾಯಚೂರ್ಗೆ . ಸರಿ  ಇರಲಿ  ಎಂದು  ರಾಯಚೂರ್  ticket ತಗೊಂಡು  ರಾಯಚೂರ್ ಗೆ  ಬಂದೆ .
ಕೊನೆಗೂ  ನಮ್  ksrtc ಬಸ್  ಹತ್ತೋ  ಪರಿಸ್ಥಿತಿ  ಬಂದೆ  ಬಿಟ್ಟಿತು . ಸಮಯ  5 ಗಂಟೆ , bus stop ಅಲ್ಲಿ  bus ಇನ್ನೇನು  ಹೊರಡುತ್ತಲೇ  ಇತ್ತು  ಬೆಂಗಳೂರಿಗೆ ,  ಓಡುತ್ತ  ಹೋಗಿ  conductor ಗೆ  , “uncle, ಬಸ್  ಬೆಂಗಳೂರಿಗೆ  ಎಷ್ಟು  ಗಂಟೆಗೆ  ಸೇರುತ್ತೆ  ಎಂದು  ಕೇಳಿದೆ ”, conductor ಹೇಳಿದ್ದು  ಬೆಳಿಗ್ಗೆ  5 ಗಂಟೆಗೆ  ಅಂತ .

Damn it..!! ಮತ್ತೆ  12 ಗಂಟೆ  journey. ಸರಿ  ಎಂದು  , 2 seat ಇರೋ  window seat ಅಲ್ಲಿ  ಕುಳಿತು  journey ಶುರು  ಮಾಡಿದೆ ..!

 Mantralayaà sindhanuràbellaryà challakereàhiriyuràtumkuràbengalur…!!!! ಇದು  rout map.

 ಈಗ  original ಕಥೆ  ಶುರು ..!!!

ನನ್ನ  ಪಕ್ಕ  ಖಾಲಿ  seat . ಸಮಯ  ಸರಿಯಾಗಿ  12:00 ಗಂಟೆ  ಮಧ್ಯರಾತ್ರಿ . ಬಳ್ಳಾರಿಲಿ  ಒಂದು  ದಂಪತಿ  bus ಹತ್ತಿದರು,  ಆಗಲೇ  bus ಫುಲ್  ಆಗಿತ್ತು , ನನ್ನ  ಪಕ್ಕ  seat ಇರೋದನ್ನ  ನೋಡಿದ  ಪುಣ್ಯಾತ್ಮ , ನನ್ನ  ಪಕ್ಕ  ಬಂದು  ಕೂತು , ಹೆಂಡತಿನ  ಹಿಂದೆ  seat ಖಾಲಿ  ಇದ್ದಲಿ  ಕಳುಹಿಸಿದ ..
ಇನ್ನೇನು  bus ಹೊರಡಲು  ಶುರು  ಬಳ್ಳಾರಿಯಿಂದ , ಪಕ್ಕದಲ್ಲಿ  ಕೂತಿದ್ದ   ಆದರ್ಶ್  ಗಂಡ, ನನ್ನನ್ನು  , “ಸರ್” ಅಂದ ..
ME: ಹೇಳಿ ,
Uncle: ಸರ್  ನಮ್  ಹತ್ರ  ಮಗು  ಇದೆ , plz ಇ  seat ಬಿಟ್ತ್ಕೊಡ್ತಿರ .. ಬೆಂಗಳೂರಿಗೆ  ಹೋಗಬೇಕು , ಹಿಂದೆನೆ  ಇನ್ನೊಂದು  seat ಖಾಲಿ ಇದೆ , ಅಲ್ಲಿ  ನಮ್  misses ಕುತಿದ್ದಾರೆ, ನೀವು  ಅಲ್ಲಿಗೆ  ಹೋಗಿದ್ರೆ  ಅವ್ರು  ಇಲ್ಲಿ  ಬರ್ತಾರೆ ..!!!

Me: oh..!! ನಾನು  ರಾಯಚೂರ್  ಇಂದ  ಬರ್ತಿರೋದು  ಸ್ವಾಮಿ , ಮುಂದೆ  ಚಳ್ಳಕೆರೆ  ಲಿ  ನೋಡೋಣ  ಬಿಡಿ  ಅಂತ  ಹೇಳಿ  ಮಲಗಿದೆ ..!
Oh.. ಏನಪ್ಪಾ  ಇದು , 12 ಗಂಟೆ  journey ಮಾಡ  ಬೇಕು  ಅಲ್ಲೂ  ಸುಖವಾಗಿ  ಇರಕ್ಕೆ  ಬಿಡಲ್ಲಲ್ಲಪ್ಪ  ಇವ್ರು  ಅನ್ಕೊಂಡು , ಮಲಗಿದರೆ  ಇನ್ನೇನು  ಎದ್ದೆಲಿಸ್ತಾನೆ  ಅಂತ  ಸುಮ್ಮನೆ  ಮಲಗಿ  ಬಿಟ್ಟೆ ..!!

ಸಮಯ  ರಾತ್ರಿ  1:30, ಚಳ್ಳಕೆರೆ  ಬಂದೆ  ಬಿಡ್ತು 
Uncle to ME: ಸರ್ , ಸರ್ ,
Me: ಕಣ್ಣು  ಒರಿಸ್ತಾ  ಎದ್ದು , ಏನಾಯಿತ್ರಿ ..!!

Uncle: ಸರ್ , ಯಾವ  seat ಕೂಡ  ಖಾಲಿ  ಅಗಲಿಲ , ನಮ್  ಹತ್ರ  ಮಗು  ಇದೆ  ಸರ್ ..!!!
Me(irritating, ಇವ  ಯಾವ  ಅಸಾಮಿ ನಪಾ  ಮಗು  ಇದೆ , ಮಗು  ಇದೆ  ಅಂತ  ಒಳ್ಳೆ  ಹಿಂಸೆ  ಮಾಡ್ತಿದ್ದಾನೆ  ಅಂತ  ) ಸರ್ , ಸರಿ  ಎಲ್ಲಿದ್ದಾರೆ  ನಿಮ್ಮೋರು  ಹೇಳಿ , ನಾನು  ಅಲ್ಲಿಗೆ  ಹೋಗ್ತೀನಿ  , ಅವರನ್ನ  ಇಲ್ಲಿ  ಗೆ  ಬರಕ್ಕೆ  ಹೇಳಿ .
Uncle: oh ತುಂಬಾ  thanks ಸರ್ . ನಮ್ ಹತ್ರ ಮಗು ಇದೆ..
Me : ಓಹ್ಹ್ಹ್ಹಹ್ಹ್ಹ್.....!!!!

ನನ್ನ  seat ಬಿಟ್ಟು  ಹಿಂದೆ  ಹೊರಡಲು  ಶುರಮಾಡಿದೆ  .. ಆದರ್ಶ  ಗಂಡನ  ಹೆಂಡತಿ , ಮಗು  ನಾ   ನಡಿಸ್ಕೊಂತ  ಕರ್ಕೊಂಡು  ಬರ್ತಿದ್ದಾಳೆ , ನಾನು  ಮಗು  ಅಂದ್ರೆ  ಯಾವ್ದೋ  ಪಾಪು  ಅನ್ಕೊಂಡ್ರೆ , ಅಣ್ಣ  james bond 7 ವರ್ಷದ  ಹುಡ್ಗಿಗೆ  ಮಗು  ಇದೆ  ಮಗು  ಇದೆ  ಅಂತ  ಸೀಟ್  ಕಿತ್ಕೊಂಡ ..!!!

ನನಗೆ  ಏನು  ತಿಳಿಯದೆ  ಸುಮ್ಮನೆ  ಒಳಗೊಳಗೇ  ಹಿಂಸಿಸುತ್ತ  ಹಿಂದೆ  ಬಂದು  3 seat  ಇರೋ  seat ಅಲ್ಲಿ  last space ಅಲ್ಲಿ  ಕುತ್ಕೊಂಡೆ ..!!

ಪಕ್ಕದಲ್ಲಿ  ಮಲಗದೇ  ಕೈ  ಕಟ್ಟಿ  ಕುಳಿತಿರುವ  , full formals ಹಾಕಿ , ಮುಖದಮೇಲೆ  ಮಂದಹಾಸ  ಹೊತ್ತ , ಚರಮಿಂಗ್   ಚಿರಂಜೀವಿ  ತರಹದ   ಅಸಾಮಿ .
ಹಂಗೆ ಜಾಗ ಮಾಡ್ಕೊಂಡು ಮಲಗಿ ಬಿಟ್ಟೆ 

Next stop  ಹಿರಿಯೂರ್,

 ನಾನು  ಗಾಢ   ನಿದ್ದೆ ಯಲ್ಲಿ  ಇದ್ದೆ , ಯಾವ  stop ಏನು  ಎಂತ  ಏನು  ಗೊತ್ತಿರಲಿಲ್ಲ . ಪಕ್ಕದಲ್ಲಿನ  full formal, ಕೈ  ಕಟ್ಟಿ  ಕುಳಿತಿದ್ದ  party ಹಿರಿಯೂರ್  ಅಲ್ಲಿ  driver ಜೊತೆ  susu ಗೆ  ಅಂತ  ಕೆಳಗಡೆ  ಹೋದ ..!!
2 ನಿಮಿಷದ  ನಂತರ , driver ಬಂದ , ನಿದ್ದೆ  ಕಣ್ಣಲ್ಲಿದ್ದ  conductor  “rite  rite” ಅಂತ  ಕೂಗೆ  ಬಿಟ್ಟ ..!!!!
OMG…Full formals ಅಸಾಮಿ  ಬಸ್  ಹತ್ತಲೇ  ಇಲ್ಲ ..!!!!

ಇದೇನು  ನಂಗೆ  ಗೊತ್ತೇ  ಇಲ್ಲ . ಹಿರಿಯೂರು  ಇಂದ  10 km ಊರಿನ  ಹೊರಗಡೆ  ಬಂದರೆ  ಧಾಬಾ , ನಮ್  ಬಸ್  coffe/tea ಅಂತ  ನಿಲ್ಲಿಸಿದ   ..

ನಿದ್ದೆಯಿಂದ  ನಾನೆದ್ದಿದ್ದು  ಅವಾಗಲೇ ..

Coffe ಕುಡಿದು , ಸ್ವಲ್ಪ  fresh ಆಗಿ , bus ಹತ್ತಿ  ಕುಳಿತುಕೊಂಡೆ ,ಬಸ್  ಹೊರಡಲು  ಶುರು  ಆಯಿತು , 5 km ಹೋಗಿದಮೇಲೆ  ನನಗೆ  ಅನುಮಾನ  ಬರಲು  ಶುರುವೈತು , ಪಕ್ಕದಲ್ಲಿ  ಇದ್ದ  formal party ಬಸ್  ಹತ್ತಿಲ್ಲವೆಂದು , ಅಸ್ಟರಲ್ಲೇ  ಬೇರೆ  ಸೀಟ್  ಅಲ್ಲಿ  ಇದ್ದ  ಜನಗಳೆಲ್ಲ  ನನ್ನನ್ನು  ಕೇಳಲು  ಶುರು  ಮಾಡಿದರು ,

 hello boss, ನಿಮ್  ಪಕ್ಕದಲ್ಲಿ  ಇದ್ದರಲ್ಲ  ಅವರೆಲ್ಲಿ ..?
ME:  ರೀ  mostly ಅವ್ರು  ಹಿರಿಯೂರ್  ಅಲ್ಲಿ  ಇಲ್ದಿರ್ಬಹುದೇನೋ ..!
Ppl:  ರೀ  ಇಲ್ಲ  ಕಣ್ರೀ , ಅವ್ರು  ನಮ್  ಜೊತೇನೆ  ಬೆಂಗಳೂರಿಗೆ   ticket ತಗೊಂಡಿದ್ರು   .
Omg..!!!!  ಜನಗಳೆಲ್ಲ  conductor ನ  ಕೂಗಲು  ಶುರು  ಮಾಡಿದರು , ಬಸ್  ಮಧ್ಯ  ರಾತ್ರಿ  haighway ಲಿ  ನಿಲ್ಲಿಸ್ಬಿಟ್ಟರು .
Conductor: ರೀ  ಧಾಬಾದಲ್ಲಿ  ಚೆನ್ನಾಗಿ  ನೋಡಿದ್ದೀನಿ  ನಾನು , ನಮ್  ಬಸ್ ನವರು  ಯಾರು  ಇರಲಿಲ್ಲ .
ಇಷ್ಟು  ಹೇಳಿದ  ಮೇಲೆ  ನನ್  ಪಕ್ಕದಲ್ಲಿ  window seat ಅಲ್ಲಿ  ಕೂತಿದ್ದ  ಹುಡುಗ  sudden  ಆಗಿ ಎದ್ದು , ಏ  ಎಲ್ಲಿ  ಇವ್ರು , ಎಲ್ಲಿ  ಅಂತ  ನಮ್ಮನ್ನೇ  ಕೇಳೋಕೆ  ಶುರು  ಮಾಡಿದ ..!!
ಆಮೇಲೆ  ಒಮ್ಮೆಲೇ , ರೀ  ಅವ್ರು  software engineer, ನಾಳೆ  office ಗೆ  ಹೋಗ್ಬೇಕಿತ್ತಂತೆ  , ಎಲ್ಲಿ  ಇಳಿದರು ರೀ ಅವ್ರು ..!! ನೋಡಿ  ಮೇಲೆ  ಇರೋ  ಆ  red  ಬ್ಯಾಗ್  ಅವರದೆ ..!!

ಇಷ್ಟು  ಹೇಳಿದ್   ಮೇಲೆ  ನನಗ್ಯಾಕೋ  ಮನಸ್ಸಾಗಲಿಲ್ಲ , ಯಾರೋ  ನಮ್  category, formlas hakidda  ಬೇರೆ , ಅಂದಮೇಲೆ   ಪಾಪ , ಹಿಂಗ್  ಆಗಬಾರದಿತ್ತು  ಅಂತ  ಅನ್ಕೊಲ್ಲೋಸ್ತೋತ್ತಿಗೆ  ಬಸ್  ಗೆ  conductor rite-rite ಹೇಳೇ  ಬಿಟ್ಟ ..!!!!
ನನಗೆ  ನಿದ್ದೆ  ನೆ  ಬರಲಿಲ್ಲ , ಮನಸಲ್ಲಿ  ನಗಲು  ಆಗುತ್ತಿಲ್ಲ , ಸುಮ್ಮನಿರಲು  ಆಗುತ್ತಿಲ್ಲ , ಪಾಪ , office ಗೆ  ಹೋಗು  ಹುಡುಗನ್ನ  ಮಧ್ಯ  ರಾತ್ರಿ  road ಅಲ್ಲಿ  ಬಿಟ್ಟು  ಬಂದ  conducor ಮೇಲೆ  ಕೋಪ ಸರಿಯಾಗಿ  ಹತ್ತಿತ್ತು ..!!!

ಮುಂದೇನಾಗುತ್ತೆ  ಅಂತ  ಯೋಚನೆ  ಮಾಡ್ತಾ  ನೆ  ಇದ್ದೆ .. ಸಮಯ  4:00 ಗಂಟೆ .  Tumkur ಧಾಟಿ  toll gate ಹತ್ರ  ಬಂದಿತ್ತು  ನಮ್  ಬಸ್ ..!!!

ಯಾರೋ  ಒಬ್ಬ  ಅಸಾಮಿ  ಓದ್ಕೊಂಡು  ಬಂದು  ಬಸ್  ಬಾಗಿಲು  ತಟ್ಟಿದ … ಬಾಗಿಲು  ತೆಗೆದ  conductor ಗೆ  ಒಮ್ಮೆಲೇ  ಭಯ ..!!!
SoftEng:  ಲೋ  ಮಗನೆ  ಎಸ್ಟೋ  ಕೊಬ್ಬು   ನಿನಗೆ , ನನ್ನ  ಬಿಟ್ಟು  ಬರ್ತೀಯ ..?
ಹೀಗೆ  ಕೆಲ್ಸ್ತಿದ್ದಂಗೆ  ನನಗೆ  ಒಮ್ಮೆಲೇ  ಆಶ್ಚರ್ಯ ,. ನನ್ನ  ಪಕ್ಕದಲ್ಲಿ  ಕುಳಿತಿದ್ದ  software asaami ಹೆಂಗೋ  ತೇಲ್ಕೊಂಡು  ನಮಗಿಂತ  ಮುಂಚೆನೇ  toll gate ಸೇರ್ಕೊಂಡು  ನಮ್  ಬಸ್  ಗೆ  ಕಾಯ್ತಾ  ಇದ್ದ ..!!! super ಅನ್ಕೊಂಡು  ಮುಂದೆನಾಗಬಹುದು  ಅಂತ  ನೋಡ್ತಾ  ಇದ್ದೆ ..!!

Condu: ರೀ  ಎಲ್ಲಿಗ್ರಿ  ಹೋಗಿದ್ರಿ , ಬಸ್  ಹತ್ರ  ಇರಕ್ಕಗಲ್ವಾ ..!!!
SE:  ಲೋ  idiot, ನಿಮ್  driver ಜೊತೆಗೆನೆ  ಇಲ್ದಿದ್ದಿನಿ , ಗೊತ್ತಾಗಲ್ವಾ  ನಿಮಗೆ , ಹೊಟ್ಟೆಗೆನ್ ತಿಂತಿರ ?
Cond  ಗೆ  ಮಾತೆ ಇರಲಿಲ್ಲ … may be ಅವ್ನು  ಏನು  ತಿಂದಿದ್ದ  ಅಂತ  ನೆನಿಸ್ಕೊಲ್ತಿದ್ದ್ನೋ  ಏನೋ  ಗೊತ್ತಿಲ್ಲ ..!!!
ಅಸ್ತ್ರಲ್ಲೇ 
SE:  ಅಧೆನ್ಗೋ  ಬಿಟ್ಟು  ಬಂದೆ  ನೀನು , ನನ್  ಬ್ಯಾಗ್  ಬಸ್  ಅಲ್ಲೇ  ಇದೆ , ಮನೆ  ಬೀಗ  ಅದೆಲ್ಲ  ಅದರಲ್ಲೇ  ಇದೆ , ಮಾನ  ಮರ್ಯಾದೆ  ಇದೆಯೇನೋ  ನಿಂಗೆ  … ಅಂತೆಲ್ಲ  ಬೈತಾ  ಬೈತಾ Engineer ಸಾಹೆಬ್ರು  ಒಮ್ಮೆಲೇ  English ನಲ್ಲಿ  ಮಾತಾಡೋಕ್ಕೆ  ಶುರು  ಮಾಡಿದ್ರು ..!!!

SE:  how big bug r u bugger, finally I caught u bug.!!!

ಕೆಲಸ  ಮಾಡಿ  ಮಾಡಿ  ಏನೇ  defect ಇದ್ರೂ   ಅದನ್ನ  bug ಅಂತಾನೆ  ಕರಿಯೋ  ಹಾಗೆ  ಆಗಿದ್ರು  ನಮ್  Soft ಸಾಹೆಬ್ರು …
ಆದರೆ  ಅ  “Bug“ meaning ನಂಗೆ  ಬಿಟ್ಟರೆ  ಬೇರೆ  ಯಾರಗೂ  ಗೊತ್ತೇ  ಆಗ್ಲಿಲ್ಲ  ಬಸ್  ಅಲ್ಲಿ .
ಸುಮ್ಮನೆ  ಮಾತಾಡದೆ  ಇದ್ದ  conductor   ಒಂದೇ  ಸಲ  0 ಇಂದ  100 ವರೆಗೂ  raise ಆಗಿ  ಬಿಟ್ಟ …..
Condu: ರೀ   ಸಾಹೇಬ್ರೆ , ಬಿಟ್ಟು  ಬಂದೀನಿ  ನಿಜ , ಆದ್ರೆ  ನಿವೆನ್ರಿ  ಗಲಿಜ್  ಗಲಿಜ್  ಆಗಿ  ಬುಗ್ಗು(BUG ) , ಮಣ್ಣು   ಅಂತೆಲ್ಲ  ಬೈತಿದ್ದಿರ , ಸರಿ  ಇರಲ್ಲ  ನೋಡ್ರಿ  ಇದು ..!!! ಏನ್ರಿ  ನೀವು  ಹಂಗೆಲ್ಲ  ಮಾತಾಡೋದು ..!!!

Yappa.. ನನಗೆ  ನಗು  ತಡ್ಕೊಲ್ಲೋಕ್ಕೆ  ಆಗ್ತಿಲ್ಲ .. ಬಸ್  ಅಲ್ಲಿ  ಇರೋ  ಜನಕ್ಕೆ  confusion, ನನಗೆ  comedy, engineer ಗೆ   tragedy, conductor ಗೆ  ಕೋಪ … ಅ  ಸನ್ನಿವೇಶ್  ನೆನಿಸ್ಕೊಂದ್ರೆ  ನನಗೆ  ಇನ್ನು  ನಗು  ನಿಲ್ಲ್ತಿಲ್ಲ ..!!!

English ” BUG”ನ  ನಮ್  conductor ಸಾಹೆಬ್ರು  ಕನ್ನಡದ್ದು  ಅನ್ಕೊಂಡು  ರಂಪ  ಮಾಡೋಕ್ಕೆ  ಶುರು  ಮಾಡ್ಬಿಟ್ಟಿದ್ರು..
ಕೊನೆಗೆ  ಹೆಂಗೋ  ಸಮಾಧಾನ  ಮಾಡಿದ್ದೈತು .. ಪಾಪ  ಅ  ಅಸಾಮಿ  ನನ್  ಪಕ್ಕ   ಬಂದು  ಮತ್ತೆ  ಕೈ  ಕಟ್ಕೊಂಡು  ಹಂಗೆ  lite ಆಗಿ  smile ಕೊಟ್ಟು  ಕುಳಿತು  ಬಿಟ್ಟ ..

ನನಗೆ  ಅಯ್ಯೋ  ಅನಿಸ್ತಿದೆ , ayyayyappa ಅಂತ  ನಗು  ಬರ್ತಿದೆ …  sudden ಆಗಿ  ನನ್  ಕಡೆಗೆ  ತಿರುಗಿದ   .
SE: ಅಲ್ಲರಿ  ನಿವಾದ್ರು  ಹೇಳಬಾರದ ..?

ME: ರೀ , ನಾವು  ಹೇಳಿದ್ವಿ , ಅದ್ರು  ಬಸ್  ಹಂಗೆ  ತಗೊಂಡು  ಬಂದ  bugger ಅಂತ  lite ಆಗಿ  ಅಂದೇ  ..!!!
SE: ನಗ್ತಾ , ಸಿಟ್ಟಿಂದ , nosense fellow idiot, ಬಾ  ನನ್  ಮಗನೆ  ನಿನ್ಮೇಲೆ  complaint large ಮಾಡ್ತೀನಿ  ಬೆಂಗಳೂರ್ ಗೆ  ಹೋದಮೇಲೆ  ಅಂತ  ಹೇಳಿ  ನನ್  ಕಡೆ  ನೋಡಿ  smile ಕೊಟ್ಟು ,

Hi this is sangamesh, working in XXXXX company . wat abt u ಅಂತ  smile  ಕೊಟ್ಟ ..!!!
ಅವ್ನ  face ನೋಡಿ  ನನಗೆ  ಏನು  ಹೇಳೋಕ್ಕೆ  ಆಗ್ಲಿಲ್ಲ .. ಕೊನೆಗೆ  ನಾನು  hello boss, this is Mahesh , same profession ಅಂತ  ಹೇಳಿದ್  ಮೇಲೆ  ಸ್ವಲ್ಪ  ಖುಷಿಯಾಗಿ  ನಗುತ್ತ , ಅವ್ನು  ನಮ್  ಬಸ್  ನ  trace ಮಾಡಿದ  story ಹೇಳಿದ ,

ಯಾವ್ದೋ  private ಬಸ್  ಹತ್ತಿ , ಪಾಪ  highway ಲಿ  ಹೋಗೋ  ಎಲ್ಲ  ಬಸ್ ಗು  over take ಮಾಡಿ  ನೋಡಿ , ಕೊನೆಗೆ  ಇಷ್ಟು  ದೂರ  ಬಂದಿರಲ್ಲ  ಬಸ್  ಅಂತ  toll gate ಹತ್ರ  ಕಾಯ್ತಿದ್ದನಂತೆ   ..

E story ಮುಗಿತಿದ್ದಂಗೆ  ಬೆಂಗಳೂರು  ಬಂದಿತ್ತು .. ಹಂಗೆ  ಒಂದು  ಸಲ  smile ಮಾಡಿ , ಬಸ್  ಇಂದ   ಸುಮ್ಮನೆ  ನಾನು  ನಗುತ್ತ  ಇಳಿದು  ಬಿಟ್ಟೆ ..!!!!

ಯಾವಾಗ  ಯಾವ   ಭಾಷೆ  ಮಾತಾಡ್  ಬೇಕೋ  ಅದು  ತುಂಬಾ  ಮುಖ್ಯ  ಅಂತ  ನನಗೆ  ಒಂದೇ  ಸಮನೆ   ಅನಿಸ್ತ  ನಗು  ಬರ್ತಾ  ಇತ್ತು ..!!!

6 comments:

ಪ್ರಮೋದ ಗುರುಬಸಪ್ಪ ಮುಧೋಳ said...

Hmmm.....Mahesh Bangalore prayana bhaari sukhakharavagittu ansattu...BIG BUG thara.....sari nakkidini nanu.....

karda said...

Maga nija super duper hit.... 100 days 365 centres.... sorry sorry 365 days 100 centres.... Nija direct maadu, laabha barlilla anko matthe bandu software engg post ge apply maadu ok na... :P :)

Mahesh Ainapure said...

@ Pramod: yavglu enadru ondu naditaane irutte nan jote..!!!
@ Kar da : maga super hit celebrations next week banglore alli... cu ..!!!

Guess who said...

Mahesh, you lost seat in my native Challakere :( . you should have given a call, Bus challakere inda horage hogtirallila..... hahhhahahha

mamta said...

hahahhahahha.. Chellakere DON.... :)

Mahesh Ainapure said...

haha..!!! thst chandru i know..!!!