ಸಮಯ ಸರಿಯಾಗಿ ಮಧ್ಯಾನ 2:10. ಮಂತ್ರಾಲಯದಲ್ಲಿ ಮದುವೆಯ ಮುಗಿಸಿ, ಎಲ್ಲರಿಗೆ ಮಾತನಾಡಿಸಿ ಬೇಗನೆ ಮದುವೇ ಮಂಟಪದಿಂದ ಹೊರಗಡೆ ಬಂದು ಬಸ್ ಹತ್ತಿ ರೈಲ್ವೆ ಸ್ಟೇಷನ್ ಗೆ ಬಂದೆ . ವಿಚಾರಿಸಿದಾಗ ತಿಳಿದದ್ದೇನು ಅಂದರೆ ಬೆಂಗಳೂರಿಗೆ ಸಾಯಂಕಾಲ 7 ಗಂಟೆಗೆ ಟ್ರೈನ್ . ನನಗೆ ನುಂಗಲಾರದ ತುಪ್ಪ .. ಮಂತ್ರಾಲಯದಿಂದಲೇ direct ಬಸ್ಗಳು ಬೆಂಗಳೂರಿಗೆ ತುಂಬಾ ಇದ್ದವು ಆದರು ಟ್ರೈನ್ journey ಮಾಡೋಣ ಎಂದು ಬಂದರೆ train ಇಲ್ಲ .. ಮತ್ತೆ ವಿಚಾರಿಸಿದೆ , ಕೊನೆಗೆ train ಇದ್ದಿದ್ದು ರಾಯಚೂರ್ಗೆ . ಸರಿ ಇರಲಿ ಎಂದು ರಾಯಚೂರ್ ticket ತಗೊಂಡು ರಾಯಚೂರ್ ಗೆ ಬಂದೆ .
ಕೊನೆಗೂ ನಮ್ ksrtc ಬಸ್ ಹತ್ತೋ ಪರಿಸ್ಥಿತಿ ಬಂದೆ ಬಿಟ್ಟಿತು . ಸಮಯ 5 ಗಂಟೆ , bus stop ಅಲ್ಲಿ bus ಇನ್ನೇನು ಹೊರಡುತ್ತಲೇ ಇತ್ತು ಬೆಂಗಳೂರಿಗೆ , ಓಡುತ್ತ ಹೋಗಿ conductor ಗೆ , “uncle, ಬಸ್ ಬೆಂಗಳೂರಿಗೆ ಎಷ್ಟು ಗಂಟೆಗೆ ಸೇರುತ್ತೆ ಎಂದು ಕೇಳಿದೆ ”, conductor ಹೇಳಿದ್ದು ಬೆಳಿಗ್ಗೆ 5 ಗಂಟೆಗೆ ಅಂತ .
Damn it..!! ಮತ್ತೆ 12 ಗಂಟೆ journey. ಸರಿ ಎಂದು , 2 seat ಇರೋ window seat ಅಲ್ಲಿ ಕುಳಿತು journey ಶುರು ಮಾಡಿದೆ ..!
Mantralayaà sindhanuràbellaryà challakereàhiriyuràtumkuràbengalur…!!!! ಇದು rout map.
ಈಗ original ಕಥೆ ಶುರು ..!!!
ನನ್ನ ಪಕ್ಕ ಖಾಲಿ seat . ಸಮಯ ಸರಿಯಾಗಿ 12:00 ಗಂಟೆ ಮಧ್ಯರಾತ್ರಿ . ಬಳ್ಳಾರಿಲಿ ಒಂದು ದಂಪತಿ bus ಹತ್ತಿದರು, ಆಗಲೇ bus ಫುಲ್ ಆಗಿತ್ತು , ನನ್ನ ಪಕ್ಕ seat ಇರೋದನ್ನ ನೋಡಿದ ಪುಣ್ಯಾತ್ಮ , ನನ್ನ ಪಕ್ಕ ಬಂದು ಕೂತು , ಹೆಂಡತಿನ ಹಿಂದೆ seat ಖಾಲಿ ಇದ್ದಲಿ ಕಳುಹಿಸಿದ ..
ಇನ್ನೇನು bus ಹೊರಡಲು ಶುರು ಬಳ್ಳಾರಿಯಿಂದ , ಪಕ್ಕದಲ್ಲಿ ಕೂತಿದ್ದ ಆದರ್ಶ್ ಗಂಡ, ನನ್ನನ್ನು , “ಸರ್” ಅಂದ ..
ME: ಹೇಳಿ ,
Uncle: ಸರ್ ನಮ್ ಹತ್ರ ಮಗು ಇದೆ , plz ಇ seat ಬಿಟ್ತ್ಕೊಡ್ತಿರ .. ಬೆಂಗಳೂರಿಗೆ ಹೋಗಬೇಕು , ಹಿಂದೆನೆ ಇನ್ನೊಂದು seat ಖಾಲಿ ಇದೆ , ಅಲ್ಲಿ ನಮ್ misses ಕುತಿದ್ದಾರೆ, ನೀವು ಅಲ್ಲಿಗೆ ಹೋಗಿದ್ರೆ ಅವ್ರು ಇಲ್ಲಿ ಬರ್ತಾರೆ ..!!!
Me: oh..!! ನಾನು ರಾಯಚೂರ್ ಇಂದ ಬರ್ತಿರೋದು ಸ್ವಾಮಿ , ಮುಂದೆ ಚಳ್ಳಕೆರೆ ಲಿ ನೋಡೋಣ ಬಿಡಿ ಅಂತ ಹೇಳಿ ಮಲಗಿದೆ ..!
Oh.. ಏನಪ್ಪಾ ಇದು , 12 ಗಂಟೆ journey ಮಾಡ ಬೇಕು ಅಲ್ಲೂ ಸುಖವಾಗಿ ಇರಕ್ಕೆ ಬಿಡಲ್ಲಲ್ಲಪ್ಪ ಇವ್ರು ಅನ್ಕೊಂಡು , ಮಲಗಿದರೆ ಇನ್ನೇನು ಎದ್ದೆಲಿಸ್ತಾನೆ ಅಂತ ಸುಮ್ಮನೆ ಮಲಗಿ ಬಿಟ್ಟೆ ..!!
ಸಮಯ ರಾತ್ರಿ 1:30, ಚಳ್ಳಕೆರೆ ಬಂದೆ ಬಿಡ್ತು
Uncle to ME: ಸರ್ , ಸರ್ ,
Me: ಕಣ್ಣು ಒರಿಸ್ತಾ ಎದ್ದು , ಏನಾಯಿತ್ರಿ ..!!
Uncle: ಸರ್ , ಯಾವ seat ಕೂಡ ಖಾಲಿ ಅಗಲಿಲ , ನಮ್ ಹತ್ರ ಮಗು ಇದೆ ಸರ್ ..!!!
Me(irritating, ಇವ ಯಾವ ಅಸಾಮಿ ನಪಾ ಮಗು ಇದೆ , ಮಗು ಇದೆ ಅಂತ ಒಳ್ಳೆ ಹಿಂಸೆ ಮಾಡ್ತಿದ್ದಾನೆ ಅಂತ ) ಸರ್ , ಸರಿ ಎಲ್ಲಿದ್ದಾರೆ ನಿಮ್ಮೋರು ಹೇಳಿ , ನಾನು ಅಲ್ಲಿಗೆ ಹೋಗ್ತೀನಿ , ಅವರನ್ನ ಇಲ್ಲಿ ಗೆ ಬರಕ್ಕೆ ಹೇಳಿ .
Uncle: oh ತುಂಬಾ thanks ಸರ್ . ನಮ್ ಹತ್ರ ಮಗು ಇದೆ..
Me : ಓಹ್ಹ್ಹ್ಹಹ್ಹ್ಹ್.....!!!!
ನನ್ನ seat ಬಿಟ್ಟು ಹಿಂದೆ ಹೊರಡಲು ಶುರಮಾಡಿದೆ .. ಆದರ್ಶ ಗಂಡನ ಹೆಂಡತಿ , ಮಗು ನಾ ನಡಿಸ್ಕೊಂತ ಕರ್ಕೊಂಡು ಬರ್ತಿದ್ದಾಳೆ , ನಾನು ಮಗು ಅಂದ್ರೆ ಯಾವ್ದೋ ಪಾಪು ಅನ್ಕೊಂಡ್ರೆ , ಅಣ್ಣ james bond 7 ವರ್ಷದ ಹುಡ್ಗಿಗೆ ಮಗು ಇದೆ ಮಗು ಇದೆ ಅಂತ ಸೀಟ್ ಕಿತ್ಕೊಂಡ ..!!!
ನನಗೆ ಏನು ತಿಳಿಯದೆ ಸುಮ್ಮನೆ ಒಳಗೊಳಗೇ ಹಿಂಸಿಸುತ್ತ ಹಿಂದೆ ಬಂದು 3 seat ಇರೋ seat ಅಲ್ಲಿ last space ಅಲ್ಲಿ ಕುತ್ಕೊಂಡೆ ..!!
ಪಕ್ಕದಲ್ಲಿ ಮಲಗದೇ ಕೈ ಕಟ್ಟಿ ಕುಳಿತಿರುವ , full formals ಹಾಕಿ , ಮುಖದಮೇಲೆ ಮಂದಹಾಸ ಹೊತ್ತ , ಚರಮಿಂಗ್ ಚಿರಂಜೀವಿ ತರಹದ ಅಸಾಮಿ .
ಹಂಗೆ ಜಾಗ ಮಾಡ್ಕೊಂಡು ಮಲಗಿ ಬಿಟ್ಟೆ
Next stop ಹಿರಿಯೂರ್,
ನಾನು ಗಾಢ ನಿದ್ದೆ ಯಲ್ಲಿ ಇದ್ದೆ , ಯಾವ stop ಏನು ಎಂತ ಏನು ಗೊತ್ತಿರಲಿಲ್ಲ . ಪಕ್ಕದಲ್ಲಿನ full formal, ಕೈ ಕಟ್ಟಿ ಕುಳಿತಿದ್ದ party ಹಿರಿಯೂರ್ ಅಲ್ಲಿ driver ಜೊತೆ susu ಗೆ ಅಂತ ಕೆಳಗಡೆ ಹೋದ ..!!
2 ನಿಮಿಷದ ನಂತರ , driver ಬಂದ , ನಿದ್ದೆ ಕಣ್ಣಲ್ಲಿದ್ದ conductor “rite rite” ಅಂತ ಕೂಗೆ ಬಿಟ್ಟ ..!!!!
OMG…Full formals ಅಸಾಮಿ ಬಸ್ ಹತ್ತಲೇ ಇಲ್ಲ ..!!!!
ಇದೇನು ನಂಗೆ ಗೊತ್ತೇ ಇಲ್ಲ . ಹಿರಿಯೂರು ಇಂದ 10 km ಊರಿನ ಹೊರಗಡೆ ಬಂದರೆ ಧಾಬಾ , ನಮ್ ಬಸ್ coffe/tea ಅಂತ ನಿಲ್ಲಿಸಿದ ..
ನಿದ್ದೆಯಿಂದ ನಾನೆದ್ದಿದ್ದು ಅವಾಗಲೇ ..
Coffe ಕುಡಿದು , ಸ್ವಲ್ಪ fresh ಆಗಿ , bus ಹತ್ತಿ ಕುಳಿತುಕೊಂಡೆ ,ಬಸ್ ಹೊರಡಲು ಶುರು ಆಯಿತು , 5 km ಹೋಗಿದಮೇಲೆ ನನಗೆ ಅನುಮಾನ ಬರಲು ಶುರುವೈತು , ಪಕ್ಕದಲ್ಲಿ ಇದ್ದ formal party ಬಸ್ ಹತ್ತಿಲ್ಲವೆಂದು , ಅಸ್ಟರಲ್ಲೇ ಬೇರೆ ಸೀಟ್ ಅಲ್ಲಿ ಇದ್ದ ಜನಗಳೆಲ್ಲ ನನ್ನನ್ನು ಕೇಳಲು ಶುರು ಮಾಡಿದರು ,
hello boss, ನಿಮ್ ಪಕ್ಕದಲ್ಲಿ ಇದ್ದರಲ್ಲ ಅವರೆಲ್ಲಿ ..?
ME: ರೀ mostly ಅವ್ರು ಹಿರಿಯೂರ್ ಅಲ್ಲಿ ಇಲ್ದಿರ್ಬಹುದೇನೋ ..!
Ppl: ರೀ ಇಲ್ಲ ಕಣ್ರೀ , ಅವ್ರು ನಮ್ ಜೊತೇನೆ ಬೆಂಗಳೂರಿಗೆ ticket ತಗೊಂಡಿದ್ರು .
Omg..!!!! ಜನಗಳೆಲ್ಲ conductor ನ ಕೂಗಲು ಶುರು ಮಾಡಿದರು , ಬಸ್ ಮಧ್ಯ ರಾತ್ರಿ haighway ಲಿ ನಿಲ್ಲಿಸ್ಬಿಟ್ಟರು .
Conductor: ರೀ ಧಾಬಾದಲ್ಲಿ ಚೆನ್ನಾಗಿ ನೋಡಿದ್ದೀನಿ ನಾನು , ನಮ್ ಬಸ್ ನವರು ಯಾರು ಇರಲಿಲ್ಲ .
ಇಷ್ಟು ಹೇಳಿದ ಮೇಲೆ ನನ್ ಪಕ್ಕದಲ್ಲಿ window seat ಅಲ್ಲಿ ಕೂತಿದ್ದ ಹುಡುಗ sudden ಆಗಿ ಎದ್ದು , ಏ ಎಲ್ಲಿ ಇವ್ರು , ಎಲ್ಲಿ ಅಂತ ನಮ್ಮನ್ನೇ ಕೇಳೋಕೆ ಶುರು ಮಾಡಿದ ..!!
ಆಮೇಲೆ ಒಮ್ಮೆಲೇ , ರೀ ಅವ್ರು software engineer, ನಾಳೆ office ಗೆ ಹೋಗ್ಬೇಕಿತ್ತಂತೆ , ಎಲ್ಲಿ ಇಳಿದರು ರೀ ಅವ್ರು ..!! ನೋಡಿ ಮೇಲೆ ಇರೋ ಆ red ಬ್ಯಾಗ್ ಅವರದೆ ..!!
ಇಷ್ಟು ಹೇಳಿದ್ ಮೇಲೆ ನನಗ್ಯಾಕೋ ಮನಸ್ಸಾಗಲಿಲ್ಲ , ಯಾರೋ ನಮ್ category, formlas hakidda ಬೇರೆ , ಅಂದಮೇಲೆ ಪಾಪ , ಹಿಂಗ್ ಆಗಬಾರದಿತ್ತು ಅಂತ ಅನ್ಕೊಲ್ಲೋಸ್ತೋತ್ತಿಗೆ ಬಸ್ ಗೆ conductor rite-rite ಹೇಳೇ ಬಿಟ್ಟ ..!!!!
ನನಗೆ ನಿದ್ದೆ ನೆ ಬರಲಿಲ್ಲ , ಮನಸಲ್ಲಿ ನಗಲು ಆಗುತ್ತಿಲ್ಲ , ಸುಮ್ಮನಿರಲು ಆಗುತ್ತಿಲ್ಲ , ಪಾಪ , office ಗೆ ಹೋಗು ಹುಡುಗನ್ನ ಮಧ್ಯ ರಾತ್ರಿ road ಅಲ್ಲಿ ಬಿಟ್ಟು ಬಂದ conducor ಮೇಲೆ ಕೋಪ ಸರಿಯಾಗಿ ಹತ್ತಿತ್ತು ..!!!
ಮುಂದೇನಾಗುತ್ತೆ ಅಂತ ಯೋಚನೆ ಮಾಡ್ತಾ ನೆ ಇದ್ದೆ .. ಸಮಯ 4:00 ಗಂಟೆ . Tumkur ಧಾಟಿ toll gate ಹತ್ರ ಬಂದಿತ್ತು ನಮ್ ಬಸ್ ..!!!
ಯಾರೋ ಒಬ್ಬ ಅಸಾಮಿ ಓದ್ಕೊಂಡು ಬಂದು ಬಸ್ ಬಾಗಿಲು ತಟ್ಟಿದ … ಬಾಗಿಲು ತೆಗೆದ conductor ಗೆ ಒಮ್ಮೆಲೇ ಭಯ ..!!!
SoftEng: ಲೋ ಮಗನೆ ಎಸ್ಟೋ ಕೊಬ್ಬು ನಿನಗೆ , ನನ್ನ ಬಿಟ್ಟು ಬರ್ತೀಯ ..?
ಹೀಗೆ ಕೆಲ್ಸ್ತಿದ್ದಂಗೆ ನನಗೆ ಒಮ್ಮೆಲೇ ಆಶ್ಚರ್ಯ ,. ನನ್ನ ಪಕ್ಕದಲ್ಲಿ ಕುಳಿತಿದ್ದ software asaami ಹೆಂಗೋ ತೇಲ್ಕೊಂಡು ನಮಗಿಂತ ಮುಂಚೆನೇ toll gate ಸೇರ್ಕೊಂಡು ನಮ್ ಬಸ್ ಗೆ ಕಾಯ್ತಾ ಇದ್ದ ..!!! super ಅನ್ಕೊಂಡು ಮುಂದೆನಾಗಬಹುದು ಅಂತ ನೋಡ್ತಾ ಇದ್ದೆ ..!!
Condu: ರೀ ಎಲ್ಲಿಗ್ರಿ ಹೋಗಿದ್ರಿ , ಬಸ್ ಹತ್ರ ಇರಕ್ಕಗಲ್ವಾ ..!!!
SE: ಲೋ idiot, ನಿಮ್ driver ಜೊತೆಗೆನೆ ಇಲ್ದಿದ್ದಿನಿ , ಗೊತ್ತಾಗಲ್ವಾ ನಿಮಗೆ , ಹೊಟ್ಟೆಗೆನ್ ತಿಂತಿರ ?
Cond ಗೆ ಮಾತೆ ಇರಲಿಲ್ಲ … may be ಅವ್ನು ಏನು ತಿಂದಿದ್ದ ಅಂತ ನೆನಿಸ್ಕೊಲ್ತಿದ್ದ್ನೋ ಏನೋ ಗೊತ್ತಿಲ್ಲ ..!!!
ಅಸ್ತ್ರಲ್ಲೇ
SE: ಅಧೆನ್ಗೋ ಬಿಟ್ಟು ಬಂದೆ ನೀನು , ನನ್ ಬ್ಯಾಗ್ ಬಸ್ ಅಲ್ಲೇ ಇದೆ , ಮನೆ ಬೀಗ ಅದೆಲ್ಲ ಅದರಲ್ಲೇ ಇದೆ , ಮಾನ ಮರ್ಯಾದೆ ಇದೆಯೇನೋ ನಿಂಗೆ … ಅಂತೆಲ್ಲ ಬೈತಾ ಬೈತಾ Engineer ಸಾಹೆಬ್ರು ಒಮ್ಮೆಲೇ English ನಲ್ಲಿ ಮಾತಾಡೋಕ್ಕೆ ಶುರು ಮಾಡಿದ್ರು ..!!!
SE: how big bug r u bugger, finally I caught u bug.!!!
ಕೆಲಸ ಮಾಡಿ ಮಾಡಿ ಏನೇ defect ಇದ್ರೂ ಅದನ್ನ bug ಅಂತಾನೆ ಕರಿಯೋ ಹಾಗೆ ಆಗಿದ್ರು ನಮ್ Soft ಸಾಹೆಬ್ರು …
ಆದರೆ ಅ “Bug“ meaning ನಂಗೆ ಬಿಟ್ಟರೆ ಬೇರೆ ಯಾರಗೂ ಗೊತ್ತೇ ಆಗ್ಲಿಲ್ಲ ಬಸ್ ಅಲ್ಲಿ .
ಸುಮ್ಮನೆ ಮಾತಾಡದೆ ಇದ್ದ conductor ಒಂದೇ ಸಲ 0 ಇಂದ 100 ವರೆಗೂ raise ಆಗಿ ಬಿಟ್ಟ …..
Condu: ರೀ ಸಾಹೇಬ್ರೆ , ಬಿಟ್ಟು ಬಂದೀನಿ ನಿಜ , ಆದ್ರೆ ನಿವೆನ್ರಿ ಗಲಿಜ್ ಗಲಿಜ್ ಆಗಿ ಬುಗ್ಗು(BUG ) , ಮಣ್ಣು ಅಂತೆಲ್ಲ ಬೈತಿದ್ದಿರ , ಸರಿ ಇರಲ್ಲ ನೋಡ್ರಿ ಇದು ..!!! ಏನ್ರಿ ನೀವು ಹಂಗೆಲ್ಲ ಮಾತಾಡೋದು ..!!!
Yappa.. ನನಗೆ ನಗು ತಡ್ಕೊಲ್ಲೋಕ್ಕೆ ಆಗ್ತಿಲ್ಲ .. ಬಸ್ ಅಲ್ಲಿ ಇರೋ ಜನಕ್ಕೆ confusion, ನನಗೆ comedy, engineer ಗೆ tragedy, conductor ಗೆ ಕೋಪ … ಅ ಸನ್ನಿವೇಶ್ ನೆನಿಸ್ಕೊಂದ್ರೆ ನನಗೆ ಇನ್ನು ನಗು ನಿಲ್ಲ್ತಿಲ್ಲ ..!!!
English ” BUG”ನ ನಮ್ conductor ಸಾಹೆಬ್ರು ಕನ್ನಡದ್ದು ಅನ್ಕೊಂಡು ರಂಪ ಮಾಡೋಕ್ಕೆ ಶುರು ಮಾಡ್ಬಿಟ್ಟಿದ್ರು..
ಕೊನೆಗೆ ಹೆಂಗೋ ಸಮಾಧಾನ ಮಾಡಿದ್ದೈತು .. ಪಾಪ ಅ ಅಸಾಮಿ ನನ್ ಪಕ್ಕ ಬಂದು ಮತ್ತೆ ಕೈ ಕಟ್ಕೊಂಡು ಹಂಗೆ lite ಆಗಿ smile ಕೊಟ್ಟು ಕುಳಿತು ಬಿಟ್ಟ ..
ನನಗೆ ಅಯ್ಯೋ ಅನಿಸ್ತಿದೆ , ayyayyappa ಅಂತ ನಗು ಬರ್ತಿದೆ … sudden ಆಗಿ ನನ್ ಕಡೆಗೆ ತಿರುಗಿದ .
SE: ಅಲ್ಲರಿ ನಿವಾದ್ರು ಹೇಳಬಾರದ ..?
ME: ರೀ , ನಾವು ಹೇಳಿದ್ವಿ , ಅದ್ರು ಬಸ್ ಹಂಗೆ ತಗೊಂಡು ಬಂದ bugger ಅಂತ lite ಆಗಿ ಅಂದೇ ..!!!
SE: ನಗ್ತಾ , ಸಿಟ್ಟಿಂದ , nosense fellow idiot, ಬಾ ನನ್ ಮಗನೆ ನಿನ್ಮೇಲೆ complaint large ಮಾಡ್ತೀನಿ ಬೆಂಗಳೂರ್ ಗೆ ಹೋದಮೇಲೆ ಅಂತ ಹೇಳಿ ನನ್ ಕಡೆ ನೋಡಿ smile ಕೊಟ್ಟು ,
Hi this is sangamesh, working in XXXXX company . wat abt u ಅಂತ smile ಕೊಟ್ಟ ..!!!
ಅವ್ನ face ನೋಡಿ ನನಗೆ ಏನು ಹೇಳೋಕ್ಕೆ ಆಗ್ಲಿಲ್ಲ .. ಕೊನೆಗೆ ನಾನು hello boss, this is Mahesh , same profession ಅಂತ ಹೇಳಿದ್ ಮೇಲೆ ಸ್ವಲ್ಪ ಖುಷಿಯಾಗಿ ನಗುತ್ತ , ಅವ್ನು ನಮ್ ಬಸ್ ನ trace ಮಾಡಿದ story ಹೇಳಿದ ,
ಯಾವ್ದೋ private ಬಸ್ ಹತ್ತಿ , ಪಾಪ highway ಲಿ ಹೋಗೋ ಎಲ್ಲ ಬಸ್ ಗು over take ಮಾಡಿ ನೋಡಿ , ಕೊನೆಗೆ ಇಷ್ಟು ದೂರ ಬಂದಿರಲ್ಲ ಬಸ್ ಅಂತ toll gate ಹತ್ರ ಕಾಯ್ತಿದ್ದನಂತೆ ..
E story ಮುಗಿತಿದ್ದಂಗೆ ಬೆಂಗಳೂರು ಬಂದಿತ್ತು .. ಹಂಗೆ ಒಂದು ಸಲ smile ಮಾಡಿ , ಬಸ್ ಇಂದ ಸುಮ್ಮನೆ ನಾನು ನಗುತ್ತ ಇಳಿದು ಬಿಟ್ಟೆ ..!!!!
ಯಾವಾಗ ಯಾವ ಭಾಷೆ ಮಾತಾಡ್ ಬೇಕೋ ಅದು ತುಂಬಾ ಮುಖ್ಯ ಅಂತ ನನಗೆ ಒಂದೇ ಸಮನೆ ಅನಿಸ್ತ ನಗು ಬರ್ತಾ ಇತ್ತು ..!!!
6 comments:
Hmmm.....Mahesh Bangalore prayana bhaari sukhakharavagittu ansattu...BIG BUG thara.....sari nakkidini nanu.....
Maga nija super duper hit.... 100 days 365 centres.... sorry sorry 365 days 100 centres.... Nija direct maadu, laabha barlilla anko matthe bandu software engg post ge apply maadu ok na... :P :)
@ Pramod: yavglu enadru ondu naditaane irutte nan jote..!!!
@ Kar da : maga super hit celebrations next week banglore alli... cu ..!!!
Mahesh, you lost seat in my native Challakere :( . you should have given a call, Bus challakere inda horage hogtirallila..... hahhhahahha
hahahhahahha.. Chellakere DON.... :)
haha..!!! thst chandru i know..!!!
Post a Comment